ಸದ್ಯದಲ್ಲೇ ಹಸೆಮಣೆ ಏರಲಿದೆ ಬಾಲಿವುಡ್ ನ ಮತ್ತೊಂದು ಜೋಡಿ !! | ಈ ಕ್ಯೂಟ್ ಕಪಲ್ ನ ಮದುವೆ ಯಾವಾಗ ಗೊತ್ತಾ???

ಸಿನಿಮಾ ರಂಗದಲ್ಲಿ ಮಿಂಚಿದ ತಾರೆಗಳು ಮದುವೆ ಆಗುವುದೆಂದರೆ ಎಲ್ಲದಕ್ಕಿಂತಲೂ ಅಭಿಮಾನಿಗಳಿಗೆ ಆಸಕ್ತಿ ಹೆಚ್ಚು. ಆಕೆಯ ಹುಡುಗ ಯಾರು? ಮದುವೆ ಯಾವಾಗ ಹೀಗೆ ನೂರೆಂಟು ಗೊಂದಲಗಳ ನಡುವೆ ಅವರ ಸುಂದರವಾದ ಮದುವೆ ಕ್ಷಣಕ್ಕೆ ಕಾಯುತ್ತಿರುತ್ತಾರೆ. ಅದೇ ರೀತಿ ಇದೀಗ ಮದುವೆ ಸುದ್ದಿಯಲ್ಲಿರುವ ಬಾಲಿವುಡ್‌ನ ಮುದ್ದಾದ ಜೋಡಿ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್.

ಇವರಿಬ್ಬರ ಮದುವೆ ಸುದ್ದಿ ನಿನ್ನೆ ಮೊನ್ನೆಯದಲ್ಲ. ಇವರಿಬ್ಬರೂ ಅಂದಿನಿಂದಲೂ ಸುದ್ದಿಯಲ್ಲೇ ಇದ್ದು,ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನು ಎಷ್ಟು ಬಾರಿ ಕೇಳಿದ್ದೇವೋ ಏನು. ಆದ್ರೂ ಅಭಿಮಾನಿಗಳಿಗೆ ಕುತೂಹಲ ಮಾತ್ರ ಹೋಗಿಲ್ಲ.ಹೌದು. ಇದೀಗ ಈ ಸುದ್ದಿಯ ಬಗೆಗಿನ ಇತ್ತೀಚಿನ ಅಪ್
ಡೇಟ್ ಅಂದರೆ ನಟ ರಣಬೀರ್ ಕಪೂರ್ ಮತ್ತು ನಟಿ
ಆಲಿಯಾ ಭಟ್ ಇದೇ ವರ್ಷದ ಅಕ್ಟೋಬರ್
ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂಬ
ಮಾಹಿತಿಗಳು ಕೇಳಿಬರುತ್ತಿವೆ.


Ad Widget

Ad Widget

Ad Widget

ಈ ಕ್ಯೂಟ್ ಕಪಲ್ಸ್ ಕಳೆದ ವರ್ಷವೇ ಮದುವೆ ಆಗಬೇಕಿತ್ತು. ನಂತರ, ಈ ವರ್ಷದ ಏಪ್ರಿಲ್‌ನಲ್ಲಿ ಆಗಬೇಕಿತ್ತು. ಆದರೆ ಏಪ್ರಿಲ್ ತಿಂಗಳಿನಲ್ಲಿ ಅಂತೂ ಖಚಿತವಾಗಿ ಆಗುವುದಿಲ್ಲ ಎಂಬಂತೆ ಕಾಣುತ್ತಿದೆ.ಯಾಕೆಂದರೆ, ಕೇವಲ 20 ದಿನಗಳ ದೂರದಲ್ಲಿರುವ ಏಪ್ರಿಲ್ 2022 ರಲ್ಲಿ ಮದುವೆಯಾಗಲು ಸಾಧ್ಯವಿಲ್ಲ
ಎನ್ನುತ್ತಿವೆ ಕೆಲವು ವರದಿಗಳು. ಹೀಗಾಗಿ, ಸದ್ಯದ
ಮಾಹಿತಿಗಳ ಪ್ರಕಾರ, ಕಪೂರ್ ಮತ್ತು ಭಟ್ ಅವರು ಈ
ವರ್ಷದ ಅಕ್ಟೋಬರ್‌ನಲ್ಲಿ ಮದುವೆ ಮಾಡಿಕೊಳ್ಳಲು
ನಿರ್ಧರಿಸಿದ್ದಾರಂತೆ.

ಮೂಲಗಳ ಪ್ರಕಾರ, “ನಟಿ ಆಲಿಯಾ ಮತ್ತು ನಟ ರಣಬೀರ್ ಮದುವೆ ವಿಷಯ ಬಂದಾಗ ದಿನಾಂಕಗಳು ಏಕೆ ಹಿಂದಕ್ಕೆ ಮತ್ತು ಮುಂದಕ್ಕೆ ಹೋಗುತ್ತಿವೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ,ಸದ್ಯದಲ್ಲೇ ಮದುವೆಯಾಗಲಿದ್ದಾರೆ ಈ ಜೋಡಿ,” ಎಂದು ತಿಳಿಸಿದ್ದಾರೆ. ಇದೀಗ, ಈ ಜೋಡಿಯ
ಅಭಿಮಾನಿಗಳಂತೂ ಅಕ್ಟೋಬರ್‌ನಲ್ಲಿಯಾದರೂ
ಇವರಿಬ್ಬರು ಮದುವೆಯಾಗಲಿ ಎಂದು
ಭಾವಿಸುತ್ತಿದ್ದಾರೆ.ಕುತೂಹಲದ ನಿರೀಕ್ಷೆಯಲ್ಲಿ ಅಭಿಮಾನಿ ಬಳಗ..

Leave a Reply

error: Content is protected !!
Scroll to Top
%d bloggers like this: