ಮದುವೆಗೂ ಮುಂಚೆ ವಧು ತನ್ನ ಸಂಗಾತಿಗೆ ಹಾಕಿದ ಕಂಡಿಷನ್ಸ್ ಏನು ಗೊತ್ತಾ??|ಒಪ್ಪಂದದ ಪತ್ರ ಓದುವ ವೀಡಿಯೋ ಫುಲ್ ವೈರಲ್

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಉತ್ತಮ ಘಟ್ಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಏಕಾಂಗಿಯಾಗಿ ನಡೆಯುತ್ತಿದ್ದ ಪಯಣ ಇಬ್ಬರು ಜೊತೆಗೂಡಿ ನಡೆಯುವಂತೆ ಆಗುತ್ತದೆ. ಹಲವಾರು ವಧು-ವರರು ತಮ್ಮ ಮದುವೆಗಿಂತ ಮುಂಚೆ ತನ್ನ ಹುಡುಗ ಅಥವಾ ಹುಡುಗಿ ಈ ರೀತಿ ಇರಬೇಕೆಂದು ಆ ರೀತಿಯವರನ್ನೇ ಆಯ್ದುಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಕಡೆ ಮದುವೆ ಬಳಿಕ ಹೇಗಿರಬೇಕು ಎಂಬ ಕಂಡೀಶನ್ ಹಾಕಿದ್ದಾಳೆ ಅಂತೆ ವಧು!!

ಸದ್ಯ ಈ ದೃಶ್ಯವೊಂದು ವೈರಲ್ ಆಗುತ್ತಿದ್ದು,ಇದು ವಧು ವರರ ನಡುವಿನ ಪ್ರೀತಿಯ ಒಪ್ಪಂದದ ಪತ್ರದ ದೃಶ್ಯ. ಸ್ವತಃ ವಧುವೇ ತಾನು ತನ್ನ ಬಾಳಸಂಗಾತಿಗೆ ಹಾಕಿದ ಕಂಡೀಷನ್‌ಗಳನ್ನು ಓದುವ ದೃಶ್ಯವಿದು.ಇವರ ಮದುವೆಗೂ ಮುನ್ನ ಕರಣ್ ಮತ್ತು ಹರ್ಷು ಎಂಬ ವಧು ವರರು ಮಾಡಿದ ಪ್ರೇಮದ ಒಪ್ಪಂದ ಇದು. `ಕರಣ್ ಮತ್ತು ಹರ್ಷು ನಡುವಿನ ಲವ್ ಎಗ್ರಿಮೆಂಟ್’ ಎಂದೇ ಈ ಒಪ್ಪಂದದ ಪತ್ರ ಶುರುವಾಗುತ್ತದೆ.

https://www.instagram.com/reel/CaMwy3UOCU2/?utm_source=ig_web_copy_link

makeupbybhumikasaj ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಧು ಕಾನ್ಫಿಡೆನ್ಶಿಯಲ್' ಅರ್ಥಾತ್ಗೌಪ್ಯ’ ಎಂದು ಬರೆದಿರುವ ಲಕೋಟೆಯನ್ನು ತೆರೆದು ಒಪ್ಪಂದದ ಪತ್ರವನ್ನು ತನ್ನ ಗೆಳೆತಿ ಎದುರು ಓದುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ಒಪ್ಪಂದ ಪತ್ರದಲ್ಲಿ ವಧು ವರನಿಗೆ ವಿಧಿಸಿರುವ ಕೆಲ ಕಂಡೀಷನ್‌ಗಳಿವೆ. ವೆಬ್‌ಸೀರಿಸ್‌ ನೋಡಿದಾಗ ಅದರ ಸ್ಪಾಯ್ಲರ್‌ಗಳನ್ನು ಹೇಳಬಾರದು, ದಿನಕ್ಕೆ ಕನಿಷ್ಠ ಮೂರು ಬಾರಿ ‘ಐ ಲವ್ ಯು’ ಹೇಳಬೇಕು, ನನ್ನನ್ನು ಬಿಟ್ಟು ಬಟರ್ ಬೋನ್‌ಲೆಸ್ ಚಿಕನ್ ಎಂದಿಗೂ ತಿನ್ನಬಾರದು. ಸದಾ ಸತ್ಯವನ್ನೇ ಹೇಳಬೇಕು ಹೀಗೆ ಒಂದಷ್ಟು ಕಂಡೀಷನ್‌ಗಳನ್ನು ಇಲ್ಲಿ ವಧು ಹಾಕಿದ್ದಾರೆ.

ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದ್ದು,ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.ಕೆಲವೊಂದಿಷ್ಟು ಮಂದಿ ನಕ್ಕರೆ, ಇನ್ನೂ ಕೆಲವೊಂದಿಷ್ಟು ಮಂದಿ ಏನು ಜೋಡಿ ಗುರು!ಅಂದಿದ್ದು ಉಂಟು.

Leave A Reply