ಮಂಗಳೂರು : ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ |
ಮಂಗಳೂರು : ಬೈಕ್ ಸ್ಟಂಟ್ ಮತ್ತು ವೀಲಿಂಗ್ ಮಾಡಿ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ಟ್ರಾಫಿಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದು, ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರ ಹೊರವಲಯ ಹಾಗೂ ಕೆಲವೊಂದು ಜನಸಂಚಾರ ಕಡಿಮೆ ಇರುವ ಕೆಲವೊಂದು ಸ್ಥಳಗಳಲ್ಲಿ ವೀಲಿಂಗ್, ಸ್ಟಂಟ್ ಮಾಡುವ ವೀಡಿಯೋ ರೆಕಾರ್ಡ್ ಮಾಡಿ ಇನ್ಸ್ ಟಾ ಗ್ರಾಮ್ ತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿತ್ತು.ಈ ವೀಡಿಯೋ ವೈರಲ್ ಆಗಿದ್ದು ಯುವಕರು ನಡುರಸ್ತೆಯಲ್ಲೇ ಸ್ಟಂಟ್ ಮಾಡುವ ಬಗ್ಗೆ ಸಾರ್ವಜನಿಕರು ಪೊಲೀಸರ ಗಮನ ಸೆಳೆದಿದ್ದರು.
ಮೊಹಮ್ಮದ್ ಅನಾಜ್, ಕಿಶನ್ ಕಿಮಾರ್, ತೌಸಿಫ್ ಮೊಹಮ್ಮದ್, ಮೊಹಮ್ಮದ್ ಸ್ವಾಲಿ, ಮೊಹಮ್ಮದ್, ಅಬ್ದುಲ್ ಜಬ್ಬಾರ್ ಸಿದ್ದಿಕ್, ಇಲ್ಯಾಸ್ ಬಂಧಿತರಾಗಿದ್ದು ಇನ್ನೊಬ್ಬ ಆರೋಪಿ ಅಪ್ರಾಪ್ತನಾಗಿದ್ದಾನೆ.
ನಾಲ್ಕು ಪ್ರತ್ಯೇಕ ಎಫ್ ಐಆರ್ ಗಳನ್ನು ಇವರ ಮೇಲೆ ದಾಖಲಿಸಿದ್ದು, ಬಂಧಿತರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಆರ್ ಟಿಒ ಅಧಿಕಾರಿಗಳಿಗೆ ಹೇಳುವುದಾಗಿ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಐದು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಡಿಸಿಪಿ ಅಪರಾಧ ವಿಭಾಗದ ದಿನೇಶ್ ಕುಮಾರ್ ಮತ್ತು ಎಸಿಪಿ ನಟರಾಜ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಈ ಬಗ್ಗೆ ಮಾ.10 ಮತ್ತು 11 ರಂದು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.