ರಶ್ಮಿಕಾ ಮಂದಣ್ಣ ಕೊಟ್ಟ ಚಮಕ್ ಗೆ ಹೌಹಾರಿದ ಬಾಲಿವುಡ್ ನಟ ವರುಣ್ ಧವನ್ !! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ವೀಡಿಯೋ

ಸದಾ ಒಂದಿಲ್ಲೊಂದು ವಿಚಾರಗಳ ಮೂಲಕ ಟ್ರೋಲ್ ಆಗುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಮತ್ತೊಮ್ಮೆ ಬಾಲಿವುಡ್ ನಟನೊಂದಿಗೆ ಟ್ರೋಲ್ ಆಗಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ವೈರಲ್ ‘ಅರೇಬಿಕ್ ಕುತ್ತು ಚಾಲೆಂಜ್’ ತೆಗೆದುಕೊಂಡಿದ್ದಾರೆ. ಇವರಿಬ್ಬರು ‘ಹಲಮಿಟಿ ಹಬಿಬೋ’ ಹಾಡಿಗೆ ಬೀಚ್ ಮೇಲೆ ಸ್ಟೆಪ್ ಹಾಕಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ. 

ಸವಾಲಿನ ಭಾಗವಾಗಿ, ಅನೇಕ ತಾರೆಯರು ಥಲಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅವರ ವೈರಲ್ ಹಾಡು ‘ಹಲಮಿಟಿ ಹಬಿಬೋ’ಗೆ ನೃತ್ಯ ಮಾಡುತ್ತಿರುವ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ಈ  ಜೋಡಿಯು ಸಮುದ್ರ ದಡದಲ್ಲಿ ಮರಳಿನ ಮೇಲೆ ನೃತ್ಯ ಮಾಡುವುದನ್ನು ಕಾಣಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ವೀಡಿಯೋ ಅಪ್​ಲೋಡ್​ ಮಾಡಿ ಒಂದು ಗಂಟೆ ಕಳೆಯುವುದರೊಳಗೆ 10 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್​ ಮಾಡಿದ್ದಾರೆ. ಅದರಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಏನೆಂದರೆ ವರುಣ್​ ಧವನ್​ಗೆ ರಶ್ಮಿಕಾ ಮಂದಣ್ಣ ಟೀಸ್​ ಮಾಡಿದ್ದಾರೆ. ಡ್ಯಾನ್ಸ್​ ಮುಗಿಸಿದ ಬಳಿಕ ವರುಣ್​ ಅವರ ಮೊಣಕಾಲಿನ ಬಳಿಗೆ ಸಡನ್​ ಆಗಿ ಕೈ ತೆಗೆದುಕೊಂಡು ಹೋಗಿ ಚಮಕ್​ ನೀಡಿದ್ದಾರೆ ರಶ್ಮಿಕಾ. ಆ ಕ್ಷಣ ವರುಣ್​ ಧವನ್​ ಹೌಹಾರಿದ್ದಾರೆ. ಈ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.

error: Content is protected !!
Scroll to Top
%d bloggers like this: