ಬೆಳ್ತಂಗಡಿ : ರಸ್ತೆ ಬದಿ ಕಸ ಎಸೆದ ವ್ಯಕ್ತಿ| ಎಸೆದವನಿಂದಲೇ ಕಸ ತೆಗೆಸಿದ ಗ್ರಾ.ಪಂ.ಅಧ್ಯಕ್ಷೆ

ಬೆಳ್ತಂಗಡಿ : ತ್ಯಾಜ್ಯವನ್ನು ಎಸೆದ ವ್ಯಕ್ತಿಯಿಂದಲೇ ಆ ತ್ಯಾಜ್ಯವನ್ನು ತೆರವುಗೊಳಿಸಿದ ಘಟನೆಯೊಂದು ಬೆಳ್ತಂಗಡಿ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೊಟ್ಟು ಎಂಬಲ್ಲಿ ನಡೆದಿದೆ.

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೊಟ್ಟು ರಸ್ತೆ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತನ್ನ ಮನೆಯ ಕಸ ತ್ಯಾಜ್ಯ ಎಲ್ಲವನ್ನು ಆಟೋ ರಿಕ್ಷಾ ಮೂಲಕ ಸಾಗಿಸಿ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದರು. ಇದನ್ನು ಗಮನಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡರಿಗೆ ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಆ ಕೂಡಲೇ ಬಂದ ಪಿಡಿಓ ಸಂತೋಷ್ ಪಾಟೀಲ್ ತ್ಯಾಜ್ಯವನ್ನು ಎಸೆದ ವ್ಯಕ್ತಿಯಿಂದಲೇ ತೆರವು ಸ್ವಚ್ಛಗೊಳಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.

Leave A Reply