ಸೀರೆಯುಟ್ಟು ಮುಖಮುಚ್ಚಿಕೊಂಡು ಮಹಿಳೆಯರ ಸಾಲಿನಲ್ಲಿ ಕುಳಿತ ಅಮ್ಮ| ತನ್ನ ತಾಯಿಯನ್ನು ಹುಡುಕುವ ಕಂದನ ಈ ದೃಶ್ಯ ಅಮೋಘ!

ಮಕ್ಕಳೆಂದರೆ ಹಾಗೆನೇ ಅವರ ನಗು ಮುಗ್ಧ ಮಾತುಗಳಿಗೆ ಮನಸೋತವರೇ ಇಲ್ಲ. ಎಲ್ಲಾ ನೋವನ್ನು ಅರೆಕ್ಷಣದಲ್ಲಿ ದೂರ ಮಾಡುವ ಶಕ್ತಿ ಈ ಕಂದಮ್ಮಗಳಿಗೆ ಇದೆ. ಹಾಗಾಗಿ ಮಕ್ಕಳು ಮಾಡುವ ಕೆಲವೊಂದು ತುಂಟಾಟದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ಬೇಗ ಕ್ಲಿಕ್ ಆಗುತ್ತದೆ. ಸದ್ಯ ಈಗ ಅಂತಹುದೇ ಒಂದು ದೃಶ್ಯ ನೆಟ್ಟಿಗರನ್ನು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರನ್ನು ಸೂಜಿಗಲ್ಲಿನಂತೆ ಸೆಳೆದಿದೆ.

ಅಮ್ಮ ಮತ್ತು ಮುದ್ದು ಕಂದನ ಅಪೂರ್ವ ದೃಶ್ಯ ಇದು. ಈ ದೃಶ್ಯವನ್ನು ನೋಡುತ್ತಿದ್ದರೆ ಮನಸ್ಸು ಖುಷಿಯಿಂದ ಅರಳುತ್ತದೆ. ಇದನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಸೀರೆಯುಟ್ಟು, ಮುಖ ಮುಚ್ಚಿಕೊಂಡು ಸಾಲಾಗಿ ಕುಳಿತಿರುವ ಮಹಿಳೆಯರ ದೃಶ್ಯದ ಮೂಲಕ 45 ಸೆಕೆಂಡಿನ ಕ್ಲಿಪ್ ಇದಾಗಿದೆ. ಮಹಿಳೆಯರು ಸಾಲಾಗಿ ಕುಳಿತಿರುವಾಗ ಮುದ್ದು ಪುಟಾಣಿ ಅಮ್ಮನನ್ನು ಹುಡುಕಿಕೊಂಡು ಬರುವ ದೃಶ್ಯದಿಂದ ಪ್ರಾರಂಭವಾಗುತ್ತದೆ. ಕಂದ ಕೋಣೆಯೊಳಗೆ ಬಂದ ತಕ್ಷಣ ಎಲ್ಲಾ ಮಹಿಳೆಯರು ಏಕಕಾಲದಲ್ಲಿ ಪುಟಾಣಿಯನ್ನು ತಮ್ಮತ್ತ ಕರೆಯುತ್ತಾರೆ. ಕಂದನಿಗೆ ಗೊಂದಲ. ಇದರಲ್ಲಿ ನನ್ನ ತಾಯಿ ಯಾರೆಂದು. ಇದೇ ಗೊಂದಲದಲ್ಲಿ ಅತ್ತಿಂದಿತ್ತ ನಡೆಯುವ ಈ ಪುಟಾಣಿ ಒಂದು ಹಂತದಲ್ಲಿ ಒಬ್ಬರು ಮಹಿಳೆಯ ಬಳಿ ಹೋದರೂ ಆಕೆ ತಾಯಿಯಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ವಾಪಸ್ ಬರುತ್ತೆ ಮಗು. ಕೊನೆಗೂ ಈ ಕಂದ ತನ್ನ ತಾಯಿಯನ್ನು ಹುಡುಕಿ ಮಡಿಲಲ್ಲಿ ಕುಳಿತುಕೊಳ್ಳುತ್ತಾ ಸಂಭ್ರಮಿಸುವ ಕ್ಷಣ ಸುಂದರ.

ವೀಡಿಯೋ ಲಿಂಕ್ ಈ ಕೆಳಗೆ ನೀಡಲಾಗಿದೆ

https://twitter.com/V_Shuddhi/status/1501109961413521413?ref_src=twsrc%5Etfw%7Ctwcamp%5Etweetembed%7Ctwterm%5E1501109961413521413%7Ctwgr%5E%7Ctwcon%5Es1_c10&ref_url=https%3A%2F%2Fd-20756039371818251419.ampproject.net%2F2202230359001%2Fframe.html

Leave A Reply

Your email address will not be published.