ಮಂಗಳೂರು : ಮುಳುಗಿರೋ ಹಡಗಿನ ಅವಶೇಷಗಳನ್ನು ದಡಕ್ಕೆ ತರುವಾಗ ಕಬ್ಬಿಣದ ಹ್ಯಾಂಡಲ್ ತಾಗಿ ಕಾರ್ಮಿಕ ಸಾವು!

ಮಂಗಳೂರು : ಮುಳುಗಿದ ಹಡಗಿನ ಅವಶೇಷಗಳನ್ನು ದಡಕ್ಕೆ ತರುವ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.

ಮೃತಪಟ್ಟವನನ್ನು ಪಶ್ಚಿಮ ಬಂಗಾಳ ಮೂಲದ ನಾಸಿರುದ್ದೀನ್ ಖಾನ್ ( 32) ಎಂದು ಗುರುತಿಸಲಾಗಿದೆ.

ತಣ್ಣೀರುಬಾವಿಯ ಬಳಿಯ ಸಮುದ್ರದಲ್ಲಿ ಹಡಗು ಮುಳುಗಿದ್ದು ಇದರ ಅವಶೇಷಗಳನ್ನು ಸಮುದ್ರದ ಆಳದಿಂದ ಹೊರತರುತ್ತಿದ್ದಾಗ ಹಡಗಿನ ಕಬ್ಬಿಣದ ಹ್ಯಾಂಡಲ್ ನಾಸಿರುದ್ದೀನ್ ಖಾನ್ ಅವರ ತಲೆಗೆ ಬಲವಾಗಿ ಬಡಿದ ಪರಿಣಾಮವಾಗಿ ಗಂಭೀರ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.

ಈ ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply