ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕರಿಬ್ಬರು ದಾರುಣ ಸಾವು !!

ಕಾಡಾನೆ ದಾಳಿಗೆ ಕಾರ್ಮಿಕರಿಬ್ಬರು ಬಲಿಯಾದ ಘಟನೆ ಇಂದು ಬೆಳಗ್ಗೆ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ನಡೆದಿದೆ.

 

ಕಡೆಗರ್ಜೆ ಗ್ರಾಮದ ಚಿಕ್ಕಯ್ಯ (50) ಮತ್ತು ಹೀರಯ್ಯ(52) ಮೃತ ದುರ್ದೈವಿಗಳು.

ಕಡೆಗರ್ಜೆ ಮನೆ ಸಮೀಪದ ತೋಟದಲ್ಲಿ ಕೆಲಸಕ್ಕೆಂದು ಇವರಿಬ್ಬರು ಇಂದು ಬೆಳಗ್ಗೆ ತೆರಳುತ್ತಿದ್ದ ವೇಳೆ ದಾಳಿ ಮಾಡಿದ ಒಂಟಿ ಸಲಗ, ಕೂಲಿ ಕಾರ್ಮಿಕರನ್ನು ತುಳಿದು ಸಾಯಿಸಿದೆ.

ಗುಂಪಿನಿಂದ ತಪ್ಪಿಸಿಕೊಂಡು ಬಂದು ಊರ ಸಮೀಪ ಬೀಡುಬಿಟ್ಟಿರುವ ಒಂಟಿ ಸಲಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಅಧಿಕಾರಿಗಳು ಸೂಕ್ತ ಕೈಗೊಂಡಿದ್ದರೆ ಕಾರ್ಮಿಕರಿಬ್ಬರ ಪ್ರಾಣ ಉಳಿಯುತ್ತಿತ್ತು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಮೇಲಧಿಕಾರಿಗಳು ಬರಬೇಕೆಂದು ಆಗ್ರಹಿಸಿ ಸ್ಥಳೀಯ ರಸ್ತೆಯಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ಕೂಡ ನಡೆಸಿದ್ದಾರೆ.

Leave A Reply

Your email address will not be published.