ವಿಮಾನ ಪ್ರಯಾಣಿಕರಿಗೊಂದು ಸಿಹಿ ಸುದ್ದಿ !! | ಶೀಘ್ರದಲ್ಲಿಯೇ ಪ್ರಯಾಣ ದರದಲ್ಲಿ ಭಾರಿ ಇಳಿಕೆ ಸಾಧ್ಯತೆ

ಎಲ್ಲರಿಗೂ ವಿಮಾನದಲ್ಲಿ ಒಮ್ಮೆಯಾದರೂ ಹಾರಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ಪ್ರಯಾಣ ತುಸು ದುಬಾರಿಯಾಗಿರುವುದರಿಂದ ಜನಸಾಮಾನ್ಯರು ತಮ್ಮ ಆಸೆಯನ್ನು ಬದಿಗೊತ್ತುತ್ತಾರೆ. ಆದರೆ ಈ ಕುರಿತು ನಿಮಗೊಂದು ಗುಡ್ ನ್ಯೂಸ್ ಇದೆ. ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೇ ದೀರ್ಘ ಕಾಲದ ಬಳಿಕ ಮಾರ್ಚ್ 27 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿತ್ತು. ಮಾರ್ಚ್ 27 ರಿಂದ ನಿಯಮಿತ ಅಂತರಾಷ್ಟ್ರೀಯ ಪ್ರಯಾಣ ಪುನರಾರಂಭಗೊಂಡಾಗ ವಿಮಾನಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುವುದರ ಸಕಾರಾತ್ಮಕ ಪ್ರಭಾವ ಟಿಕೆಟ್ ದರಗಳ ಮೇಲೆ ಕಾಣಿಸಲಿದೆ ಎಂದು ತಜ್ಞರು ಭಾವಿಸಿದ್ದಾರೆ. ಇದರಿಂದಾಗಿ ಪ್ರಯಾಣ ದರ ಶೇ.40ರಿಂದ 50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ವಾಸ್ತವದಲ್ಲಿ ಎರಡು ವರ್ಷಗಳ ಹಿಂದೆ, ಕೊರೋನಾ ಪ್ರಕರಣಗಳ ಹೆಚ್ಚಳದಿಂದಾಗಿ ಸುರಕ್ಷತೆಯ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಲುಫ್ಥಾನ್ಸ ಮತ್ತು ಅದರ ಸಮೂಹ ವಾಹಕ ಕಂಪನಿ ಸ್ವಿಸ್ ಮುಂಬರುವ ದಿನಗಳಲ್ಲಿ ವಿಮಾನಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜಿಸಿದೆ. ಇದೇ ವೇಳೆ, ಸಿಂಗಾಪುರ್ ಏರ್ಲೈನ್ಸ್ ಶೇ. 17 ರಷ್ಟು ವಿಮಾನಗಳನ್ನು ಹೆಚ್ಚಿಸಲು ಪರಿಗಣಿಸುತ್ತಿದೆ. ದೇಶೀಯ ವಾಹಕ ಇಂಡಿಗೋ ಮುಂಬರುವ ತಿಂಗಳುಗಳಲ್ಲಿ 100 ಜಾಗತಿಕ ವಿಮಾನಗಳನ್ನು ಪ್ರಾರಂಭಿಸಲು ಯೋಜಿಸಿದೆ.

ಸಂಸ್ಥೆಗಳ ಈ ಎಲ್ಲಾ ನಿರ್ಧಾರಗಳು ವಿಮಾನಯಾನ ದರಗಳ ಮೇಲೆ ನೇರ ಪ್ರಭಾವ ಬೀರುವುದು ಖಚಿತ ಎನ್ನಲಾಗುತ್ತಿದೆ. ವಾಸ್ತವದಲ್ಲಿ, ದೇಶದಲ್ಲಿ ನಿಯಮಿತ ಅಂತರಾಷ್ಟ್ರೀಯ ವಿಮಾನಗಳ ನಿಷೇಧದ ಸಮಯದಲ್ಲಿ, ಕೆಲವು ದೇಶಗಳೊಂದಿಗೆ ಏರ್ ಬಬಲ್ ಸಿಸ್ಟಮ್ ಅಡಿಯಲ್ಲಿ ಸೀಮಿತ ವಿದೇಶಿ ವಿಮಾನಗಳನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು. ಈ ಕಾರಣದಿಂದಾಗಿ, ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ಭಾರತ-ಯುಎಸ್ ಸೇರಿದಂತೆ ಕೆಲವು ಪ್ರಮುಖ ವಿಮಾನ ಮಾರ್ಗಗಳಲ್ಲಿನ ದರಗಳು ಶೇ.100ರಷ್ಟು ಏರಿಕೆಯಾಗಿವೆ.

ಅಂತರರಾಷ್ಟ್ರೀಯ ವಿಮಾನಯಾನಗಳ ಕಡಿಮೆ ಆವರ್ತನದಿಂದಾಗಿ, ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಪೂರೈಕೆಯ ಬಿಕ್ಕಟ್ಟು ಎದುರಾಗಿತ್ತು. ಇದು ವಿಮಾನಯಾನದ ಮೇಲೆ ಪರಿಣಾಮ ಬೀರಿದ್ದಲ್ಲದೆ, ಅದು ದ್ವಿಗುಣಗೊಂಡಿತ್ತು. ಮಾರ್ಚ್ 27 ರಿಂದ ವಿಮಾನ ಸೇವೆಯ ಸಾಮಾನ್ಯೀಕರಣದಿಂದಾಗಿ ದರಗಳು ಇಳಿಕೆಯಾಗಲಿವೆ.

Leave A Reply

Your email address will not be published.