ಮಲ್ಪೆ: ಮೀನುಗಾರರ ಬಲೆಗೆ ಬಿತ್ತು 250 ಕೆ.ಜಿ ಗಾತ್ರದ ಬೃಹತ್ ಶಾರ್ಕ್ ಮೀನು!!
ಇಂದು ಸಮುದ್ರಕ್ಕಿಳಿದ ಮೀನುಗಾರರಿಗೆ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿದೆ. ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗರಗಸ ಅಥವಾ ಕಾರ್ಪೆಂಟರ್ ಶಾರ್ಕ್ ಅನ್ನು ಮಲ್ಪೆಯಲ್ಲಿ ಮೀನುಗಾರರು ಸೆರೆ ಹಿಡಿದಿದ್ದಾರೆ.
ಸುಮಾರು 250 ಕೆ.ಜಿ ತೂಕದ ಈ ದೈತ್ಯ ಮೀನನ್ನು ನೋಡಲು ಬಂದರಿನಲ್ಲಿ ಅಪಾರ ಜನಸ್ತೋಮ ನೆರೆದಿತ್ತು.
ವಿಚಿತ್ರವಾಗಿ ಕಾಣುತ್ತಿದ್ದ ಈ ಮೀನನ್ನು ಕ್ರೇನ್ ಸಹಾಯದಿಂದ ದೋಣಿಯಿಂದ ಟ್ರಕ್‌ಗೆ ಸ್ಥಳಾಂತರಿಸಲಾಯಿತು.
ಇವು ಸಾಮಾನ್ಯವಾಗಿ ಕರಾವಳಿ ಸಮುದ್ರದಲ್ಲಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇತ್ತೀಚಿಗೆ ಕರಾವಳಿ ಭಾಗದಲ್ಲಿ ಈ ರೀತಿಯ ಅಪರೂಪದ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿರುವುದು ಹೆಚ್ಚಾಗಿದೆ.