ಎಡಗೈಯಲ್ಲಿ ಊಟ ಮಾಡಿದ ವಧು | ಕಲ್ಯಾಣ ಮಂಟಪದಿಂದ ಎದ್ದು ಹೋದ ವರ !

ವಧು ಎಡಗೈಯಲ್ಲಿ ಊಟ ಮಾಡಿದಳೆಂದು ವರನೊಬ್ಬ ಮದುಮಗಳನ್ನು ಕಲ್ಯಾಣ ಮಂಟಪದಲ್ಲೇ ಬಿಟ್ಟು ಹೋದ ವಿಲಕ್ಷಣ ಘಟನೆ ದಾಂಡೇಲಿಯಿಂದ ವರದಿಯಾಗಿದೆ.

 

ದಾಂಡೇಲಿಯ ಈಶ್ವರ ದೇವಸ್ಥಾನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ತಾಳಿ ಕಟ್ಟಿದ ಬಳಿಕ ಊಟಮಾಡುತ್ತಿರುವಾಗ ಮದುಮಗಳು ಎಡಕೈಯಲ್ಲಿ ಊಟ ಮಾಡುವುದನ್ನು ಗಮನಿಸಿದ ಮದುಮಗ ಮತ್ತು ಆತನ ಕುಟುಂಬಸ್ಥರು ಮದುಮಗಳನ್ನು ಬಿಟ್ಟು ಹೋಗಲು ಯತ್ನಿಸಿದಾಗ ಸ್ಥಳೀಯರು ಹೋಗಲು ತಡೆದಿದ್ದಾರೆ.

ದಾಂಡೇಲಿ ಸಮೀಪದ ವಿಲಕ ಚೇತನ ವಧುವನ್ನು ಮೂರು ದಿನದ ಹಿಂದೆ ಸಮೀಪದ ಊರಿನ ಹುಡುಗ ಒಪ್ಪಿ ಮದುವೆಯಾಗಿದ್ದ. ಆದರೆ ಊಟದ ಸಮಯದಲ್ಲಿ ಆಕೆ ಎಡಗೈಯಲ್ಲಿ ಊಟಮಾಡುತ್ತಿರುವುದನ್ನು ಕಂಡು, ಬಿಟ್ಟು ಹೋಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಮತ್ತು ಮಹಿಳಾ ಕೇಂದ್ರದ ಮುಖ್ಯಸ್ಥರು ಎರಡೂ ಕಡೆಯವರ ಜೊತೆ ಮಾತುಕತೆ ನಡೆಸಿ, ಸುಖ ಸಂಸಾರಕ್ಕಾಗಿ ಬುದ್ಧಿವಾದ ಹೇಳಿ, ಕೊನೆಗೂ ಸಂಧಾನ ಮಾಡಿಸಿ ವರನನ್ನು ಒಪ್ಪಿಸಿದ್ದಾರೆ.

Leave A Reply

Your email address will not be published.