ಮಗ ಬೈದನೆಂದು ಮನನೊಂದು ತಂದೆ ಆತ್ಮಹತ್ಯೆಗೆ ಶರಣು | ತಂದೆಯ ಸಾವಿನ ಸುದ್ದಿ ಕೇಳಿ ಪಾಪಪ್ರಜ್ಞೆಯಿಂದ ನೇಣಿಗೆ ಕೊರಳೊಡ್ಡಿದ ಮಗ !!

Share the Article

ಕೊಡಗು:ಮಗ ಬೈದಿದ್ದಕ್ಕೆ ತಂದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು,ಇತ್ತ ತಂದೆಯ ಸಾವಿನ ಸುದ್ದಿ ಕೇಳಿ ಮಗನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಯಕ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ.

ತಂದೆ 75 ವರ್ಷದ ಸುಬ್ಬಯ್ಯ ಹಾಗೂ ಮಗ 36 ವರ್ಷದ ಗಿರೀಶ್ ಗಣಪತಿ ಆತ್ಮಹತ್ಯೆಗೆ ಶರಣಾದವರು.

ಯಾವುದೋ ಸಣ್ಣ ವಿಚಾರಕ್ಕೆ ಮಗ ಬೈದನೆಂದು ಬೇಸರಗೊಂಡು ತಂದೆ ಸುಬ್ಬಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ವಿಷಯ ತಿಳಿದ ಪುತ್ರ ಗಿರೀಶ್ ನೇಣಿಗೆ ಶರಣಾಗಿದ್ದಾನೆ.ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply