ರಸ್ತೆ ದಾಟುತ್ತಿರುವ ಭಾರಿ ಗಾತ್ರದ ಹೆಬ್ಬಾವು | ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು! ಇದು ಎಲ್ಲಿ ಗೊತ್ತಾ?

ಬೃಹತ್ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.ರಸ್ತೆ ದಾಟುತ್ತಿರುವ ಹೆಬ್ಬಾವಿನ ಎಡಗಣ್ಣು ಫಳಫಳ ಹೊಳೆಯುತ್ತಿದೆ ಮತ್ತು ತೆವಳುತ್ತಾ ಮುಂದೆ ಸಾಗಿದರೂ ಮುಗಿಯಲೊಲ್ಲದ ಅದರ ಉದ್ದನೆಯ ದೇಹ ಮಿರಮಿರ ಮಿಂಚುತ್ತಿದೆ.

 

ಇದು ಅಂತಿಂಥ ಹಾವಲ್ಲ, ಮೈಯಲ್ಲಿ ನಡುಕ ಹುಟ್ಟಿಸಿ ಹೆದರಿಕೆಯಿಂದ ಚಳಿಜ್ವರ ಬರುವಂತೆ ಮಾಡುವ ಬೃಹತ್ ಗಾತ್ರದ ಹೆಬ್ಬಾವು, ಸದ್ಯ, ಇದು ಕಾಣಿಸಿಕೊಂಡಿರುವುದು ದೂರದ ಆಸ್ಸಾಮ್ ರಾಜ್ಯದ ರಂಗುರ್ ಅರಣ್ಯ ಪ್ರದೇಶದಲ್ಲಿ.

ಸಾಮಾನ್ಯವಾಗಿ ಹೆಬ್ಬಾವು ಕಚ್ಚುವುದಿಲ್ಲ. ಈ ಹಾವು ತನ್ನ ಪಾಡಿಗೆ ತಾನು ಅರಣ್ಯಪ್ರದೇಶದಲ್ಲಿ ಹಾದು ಹೋಗಿರುವ ಟಾರು ರಸ್ತೆಯನ್ನು ತೆವಳುತ್ತಾ ಕ್ರಾಸ್ ಮಾಡುತ್ತಿದೆ. ಈ ಭಾಗದಲ್ಲಿ ಯಾರೋ ವಿಡಿಯೋ ಮಾಡಿದ್ದಾರೆ. ವಿಡಿಯೋ ನೋಡಿ.

Leave A Reply

Your email address will not be published.