ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ !!

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ.

ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ವೈಫಲ್ಯದಿಂದ ಕಳೆದ ಶನಿವಾರ ನ್ಯೂ ಓರ್ಲಿಯನ್ಸ್‌ನಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು, ಟ್ರಂಪ್ ಅವರ ಸಲಹೆಗಾರರು ಮತ್ತು ರಹಸ್ಯ ಸೇವೆಯೊಂದಿಗೆ ಸುರಕ್ಷಿತವಾಗಿ ವಿಮಾನವು ತುರ್ತು ಲ್ಯಾಂಡಿಗ್ ಆಗಿದೆ ಎಂದು ತಿಳಿಸಿದ್ದಾರೆ.

ನ್ಯೂ ಓರ್ಲಿಯನ್ಸ್‌ನಲ್ಲಿ ತಮ್ಮ ಫ್ಲೋರಿಡಾ ಎಸ್ಟೇಟ್ ಮಾರ್-ಎ-ಲಾಗೊಗೆ ಹಿಂತಿರುಗುತ್ತಿದ್ದಾಗ ಶನಿವಾರ ರಾತ್ರಿ 11 ಗಂಟೆಗಿಂತ ಸ್ವಲ್ಪ ಮುಂಚೆ ತಾಂತ್ರಿಕ ವೈಫಲ್ಯ ಸಂಭವಿಸಿದೆ. ಘಟನೆಯ ಬಗ್ಗೆ ತಿಳಿದಿರುವ ವ್ಯಕ್ತಿಯ ಪ್ರಕಾರ, ನ್ಯೂ ಓರ್ಲಿಯನ್ಸ್ ಲೇಕ್‍ಫ್ರಂಟ್ ವಿಮಾನ ನಿಲ್ದಾಣವನ್ನು ತೊರೆದ ನಂತರ ಸುಮಾರು 120 ಕಿಲೋಮೀಟರ್ ದೂರದಲ್ಲಿ ಈ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ತುರ್ತು ಲ್ಯಾಂಡಿಂಗ್ ಅನ್ನು ದೃಢಪಡಿಸಿದ ನಂತರ ಟ್ರಂಪ್ ವಕ್ತಾರರು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ತುರ್ತು ಲ್ಯಾಂಡಿಂಗ್ ನಂತರ, ಟ್ರಂಪ್ ಅವರ ತಂಡವು ಮತ್ತೊಂದು ಖಾಸಗಿ ವಿಮಾನವನ್ನು ತೆಗೆದುಕೊಂಡು ಅಂತಿಮವಾಗಿ ಮರುದಿನ ಬೆಳಿಗ್ಗೆ ಮಾರ್-ಎ-ಲಾಗೊಗೆ ತೆರಳಿದ್ದಾರೆ.

Leave A Reply

Your email address will not be published.