ಶೇನ್ ವಾರ್ನ್ ಸಾವಿನ ಪ್ರಕರಣ : ರೆಸಾರ್ಟ್ ನಿಂದ ಹೊರಟು ಹೋದ ನಾಲ್ವರು ಮಹಿಳೆಯರ ಮೇಲೆ ಕಣ್ಣು

ಆಸ್ಟ್ರೇಲಿಯಾ : ಶೇನ್ ವಾರ್ನ್ ಸಾವಿನ ಮುನ್ನ ತಂಗಿದ್ದ ಐಷಾರಾಮಿ ಥಾಯ್ ಹಾಲಿಡೇ ರೆಸಾರ್ಟ್ ಗೆ ನಾಲ್ವರು ಮಹಿಳಾ ಮಾಸ್ಸೇಸ್ ಗಳು ಬಂದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ಚಿತ್ರ ಸಾವಿಗೆ ಮತ್ತಷ್ಟು ಟ್ವಿಸ್ಟ್ ನೀಡುತ್ತಿದೆ.

 

ಶೇನ್ ವಾರ್ನ್ ಶವವಾಗಿ ಪತ್ತೆಯಾಗುವ ಕೇವಲ ಎರಡು ಗಂಟೆಗಳ ಮೊದಲು ಈ ಮಹಿಳೆಯರು ಬಂದು ತೆರಳಿದ್ದಾರೆ ಎಂದು ಸ್ಥಳೀಯ ಪೊಲೀಸರು ವರದಿ ಮಾಡಿದ್ದಾರೆ.

ವಾರ್ನ್ ಅವರಿಗೆ ಶುಕ್ರವಾರ ಮಧ್ಯಾಹ್ನ ಕೊಹ್ ಸಮುಯಿಯಲ್ಲಿರುವ ವಿಶೇಷ ಸಮುಜಾನಾ ವಿಲ್ಲಾ ರೆಸಾರ್ಟ್ನಲ್ಲಿ ಇಬ್ಬರು ಮಹಿಳೆಯರು ಮಸಾಜ್ ಮಾಡಿದ್ದಾರೆ. ಬಳಿಕ ವಾರ್ನ್‌ ಮೂವರು ಸ್ನೇಹಿತರೊಂದಿಗೆ 2 ಗಂಟೆಗಳ ಕಾಲ ಕಳೆದರು ಎನ್ನಲಾಗ್ತಿದೆ.
ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶುಕ್ರವಾರ ಮಧ್ಯಾಹ್ನ 1.53ಕ್ಕೆ ನಾಲ್ಕು ಮಹಿಳೆಯರು ರೆಸಾರ್ಟ್ʼಗೆ ಬರುವುದನ್ನ ತೋರಿಸುತ್ತದೆ. ಇದರಲ್ಲಿ ಇಬ್ಬರು ಮಹಿಳೆಯರು ವಾರ್ನ್ ಅವರ ಸೂಟ್ʼಗೆ ಭೇಟಿ ನೀಡಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಇಬ್ಬರುಇಬ್ಬರು ಮಹಿಳೆಯರು ವಾರ್ನ್ ಅವ್ರ ಸ್ನೇಹಿತರೊಂದಿಗೆ ಎರಡು ಗಂಟೆಗಳ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಬಳಿಕ ಮಧ್ಯಾಹ್ನ 2.58ಕ್ಕೆ ನಾಲ್ಕು ಮಹಿಳೆಯರು ಒಟ್ಟಾಗಿ ಹೊರಡುವ ದೃಶ್ಯ ಸೆರೆಯಾಗಿದೆ.

ಮಹಿಳೆಯರು ರೆಸಾರ್ಟ್ʼನಿಂದ ಹೊರಟ ಎರಡು ಗಂಟೆ 17 ನಿಮಿಷಗಳ ನಂತ್ರ ಸಂಜೆ 5.15ಕ್ಕೆ ವಾರ್ನ ತಮ್ಮ ಕೋಣೆಯಲ್ಲಿ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ ವಾರ್ನ್ ಅವರ ಕೋಣೆಗೆ ಭೇಟಿ ನೀಡಿದ ಇಬ್ಬರು ಮಹಿಳೆಯರು ವಾರ್ನ್‌ ಅವರನ್ನ ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳು ಎಂದು ನಂಬಲಾಗಿದೆ.

ಆದರೆ ಇತ್ತ ಪೊಲೀಸರು ವಾರ್ನ್‌ ಸಾವಿನಲ್ಲಿ ಯಾರ ಕೈವಾಡವೂ ಇಲ್ಲ, ಅವ್ರು ನೈಸರ್ಗಿಕ ಕಾರಣಗಳಿಂದ ಸತ್ತಿದ್ದಾರೆ ಎಂದು ಮನವರಿಕೆಯಾಗಿದೆ ಎಂದಿದ್ದಾರೆ.
ಒಟ್ಟಾರೆ ಇಸವಿನ ಸುತ್ತ ಇದೀಗ ಮತ್ತೆ ಅನುಮಾನ ಎದ್ದುಕಾಣುತ್ತಿದೆ.

Leave A Reply

Your email address will not be published.