ಯಾರೂ ಖರೀದಿಸದ ಹಳೆಯ ಮನೆಯನ್ನು ಯುವಕನೋರ್ವ ಖರೀದಿಸಿ ಕೋಟ್ಯಧಿಪತಿಯಾದ| ಅಷ್ಟಕ್ಕೂ ಆ ಮನೆಯಲ್ಲಿ ಇದ್ದಿದ್ದಾದರೂ ಏನು!?

ಅದೃಷ್ಟ ಇದ್ದರೇನೇ ಯಾವುದಾದರು ಕೆಲಸ ಉತ್ತಮ ರೀತಿಲಿ ನಡೆಯಲು ಸಾಧ್ಯ.ಅದೃಷ್ಟಕ್ಕಿಂತ ಶ್ರಮ ಮುಖ್ಯ ಎಂದು ಹೇಳಬಹುದು. ಆದ್ರೆ ಕೆಲವೊಂದು ಬಾರಿ ಅದೆಷ್ಟೇ ಬೆವರು ಸುರಿಸಿದರೂ ಅದೃಷ್ಟ ಎಂಬ ಪಟ್ಟಿ ನಮ್ಮ ತಲೆ ಮೇಲೆ ಇಲ್ಲದಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯವೇ ಇಲ್ಲ.ಉದಾಹರಣೆಗೆ ಉದ್ಯೋಗಿಗಳು ಉತ್ತಮ ಶ್ರಮ ಪಟ್ಟು ಅದೆಷ್ಟೇ ದುಡಿದರೂ ಕೊನೆಗೆ ಪ್ರತಿಫಲ ಮಾತ್ರ ಶೂನ್ಯವಾಗಿರುತ್ತೆ. ಇದಕ್ಕೆಲ್ಲ ಕಾರಣ ಅದೃಷ್ಟ!

 

ಇಷ್ಟೆಲ್ಲಾ ಅದೃಷ್ಟದ ಕುರಿತು ವಿವರಣೆ ನೀಡಲು ಕಾರಣ ಏನು ಗೊತ್ತೇ!!? ಇಲ್ಲಿದೆ ನೋಡಿ.ಹೌದು. ಇಲ್ಲೊಂದು ಯುವಕನೋರ್ವನಿಗೆ ಅದೃಷ್ಟದ ಬಾಗಿಲು ತಟ್ಟಿದೆ.ಅದು ಅಂತಿಂತ ಬಂಪರ್ ಅಲ್ಲ..ಕೇವಲ ಹಳೆಯ ಮನೆ ಖರೀದಿಸಿ ಕೋಟ್ಯಧಿಪತಿಯಾಗುವಂತಹ ಆಫರ್.

ಅಲೆಕ್ಸ್ ಎಂಬ ಯುವಕನಿಗೆ ಅದೃಷ್ಟ ಕೈ ಹಿಡಿದ ಪರಿಣಾಮ ಕೋಟ್ಯಧಿಪತಿಯಾಗಿದ್ದಾನೆ.ಹೌದು.ಎಲ್ಲರೂ ನಿರ್ಲಕ್ಷ್ಯ ಮಾಡಿದ ಹಳೆಯ ಮನೆಯನ್ನು ಅಲೆಕ್ಸ್ ಖರೀದಿ ಮಾಡಿದ್ದನು.ಅಲೆಕ್ಸ್ ಗೆ ಹಳೆಯ ವಸ್ತುಗಳನ್ನು ಖರೀದಿಸೋದು ಹವ್ಯಾಸವಾಗಿತ್ತು. 9ನೇ ವಯಸ್ಸಿನಿಂದಲೇ ಹಳೆ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಅಲೆಕ್ಸ್ ಗೆ ಇತ್ತು. ಅದು ಮುಂದೆ ವ್ಯವಹಾರವಾಗಿ ಬದಲಾಗಿತ್ತು.ಪಾಳು ಬಿದ್ದ ಮನೆ ಖರೀದಿಸಿದ್ದ ಅಲೆಕ್ಸ್ ಗೆ ಒಳಗೆ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳು ಸಿಕ್ಕಿವೆ. ಅಲೆಕ್ಸ್ ಡಿಸೆಂಬರ್ 2020 ರಲ್ಲಿ ಮನೆಯನ್ನು ಖರೀದಿಸುತ್ತಾನೆ. ಈ ಮನೆಗೆ ಅಲೆಕ್ಸ್ 7,331 ಯುರೋ (7,64,255 ರೂ) ನೀಡಿ ಖರೀದಿಸಿದ್ದನು. ಆದರೆ ಮನೆಯೊಳಗಿನ ಖಜಾನೆ ಖರೀದಿಸಿದ ಬೆಲೆಗಿಂತ ಹೆಚ್ಚಾಗಿತ್ತು.

ಈ ಮನೆಯಲ್ಲಿ ಮೊದಲು ಫ್ಯಾಷನ್ ಕೆಲಸ ಮಾಡುತ್ತಿದ್ದ ವ್ಯಕ್ತಿ ವಾಸಿಸುತ್ತಿದ್ದನು. ಹಾಗಾಗಿ ಅಲೆಕ್ಸ್ ಗೆ ಈ ಮನೆಯಲ್ಲಿ ಹಳೆಯ ಅಥವಾ ಬೆಲೆ ಬಾಳುವ ವಸ್ತುಗಳು ಸಿಗಬಹುದು ಎಂಬ ನಂಬಿಕೆ ಇತ್ತು. ಅದ್ದರಿಂದ ಎಲ್ಲರೂ ನಿರ್ಲಕ್ಷ್ಯ ಮಾಡಿದ್ರೂ ಅಲೆಕ್ಸ್ ಮನೆ ಖರೀದಿಸಿದ್ದನು.ಅಲೆಕ್ಸ್ ಗೆ ಮನೆಯಲ್ಲಿ ಸಾಕಷ್ಟು ವಿಂಟೇಜ್ ವಸ್ತಗಳು ಸಿಕ್ಕಿವೆ. ವಿಂಟೇಜ್ ಟಿಫಾನಿ ಆಭರಣಗಳು, ಶನೆಲ್ ಬಟ್ಟೆಗಳು ಮತ್ತು ಬರ್ಬೆರ್ರಿ ಬಾಕ್ಸ್‌ ಗಳು ಮನೆಯಲ್ಲಿದ್ದವು. ಮನೆಯ ವಾರ್ಡ್ ರೋಬ್ ತೆರೆದು ನೋಡಿದಾಗ ಅದು ಸಂಪೂರ್ಣವಾಗಿ ಡಿಸೈನರ್ ಬಟ್ಟೆಗಳಿಂದ ತುಂಬಿತ್ತು. ಇಷ್ಟೇ ಅಲ್ಲ ಒಂದು ವಾಲೆಟ್ ಹಣದಿಂದ ತುಂಬಿತ್ತು. ಈ ಹಳೆಯ ಮನೆಯಲ್ಲಿ 100 ಕ್ಕೂ ಹೆಚ್ಚು ಬೆಳ್ಳಿಯ ತುಂಡುಗಳು, ಚಿನ್ನ ಮತ್ತು ವಜ್ರದ ಉಂಗುರಗಳು ಸಹ ಪತ್ತೆಯಾಗಿವೆ.

ಇದೇ ಮನೆಯನ್ನು ಅಲೆಕ್ಸ್ 293,270 ಯುರೋಗಳಿಗೆ (ರೂ. 3,05,70,200) ಮಾರಾಟ ಮಾಡಿದ್ದು,ಇದಕ್ಕಾಗಿ ಮೂರು ಬಾರಿ ಮನೆಯಲ್ಲಿರುವ ವಸ್ತುಗಳನ್ನು ಪ್ರತ್ಯೇಕವಾಗಿ ಹರಾಜು ಹಾಕಿದ್ದಾನೆ. ಇದು ತನ್ನ ಜೀವನದ ಅತ್ಯುತ್ತಮ ಹೂಡಿಕೆ ಎಂದು ಅಲೆಕ್ಸ್ ಸ್ವತಃ ಹೇಳುತ್ತಾನೆ.

Leave A Reply

Your email address will not be published.