ಸಾಯುವ 15 ವರ್ಷದ ಮೊದಲೇ ತನಗಾಗಿ ಸಮಾಧಿ ಕಟ್ಟಿಕೊಂಡ 70 ರ ವ್ಯಕ್ತಿ !!

ದಾವಣಗೆರೆ :ಸತ್ತವರ ನೆನಪಿಗಾಗಿ ಸಮಾಧಿಯನ್ನು ಕಟ್ಟೋದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಒಬ್ಬ ತಾನೇ ತನಗಾಗಿ ಸಮಾಧಿಯನ್ನು ಕಟ್ಟಿ ಹೆಸರನ್ನೂ ಇಟ್ಟು ತನ್ನ ದಿನವೆಲ್ಲವನ್ನೂ ಅದರ ಪಕ್ಕದಲ್ಲೇ ಕಳೆಯುತ್ತಿದ್ದಾನೆ.

ಈ ವಿಚಿತ್ರ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜರೇಕಟ್ಟೆ ಗ್ರಾಮದಲ್ಲಿ ನಡೆದಿದ್ದು, ಆ ವ್ಯಕ್ತಿಯೇ ತಿಪ್ಪಣ್ಣರಾವ್. 70 ವರ್ಷದ ತಿಪ್ಪಣ್ಣ, ಇಂದು ಈ ಸಮಾಧಿ ನಿರ್ಮಿಸಿಕೊಂಡಿರೋದಲ್ಲ. ಬದಲಾಗಿ ಹದಿನೈದು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿದ್ದು, ಅದಕ್ಕೆ ಶಿವರಾಮ ಕಾರಂತರ ಕಾದಂಬರಿ ಮರಳಿ ಮಣ್ಣಿಗೆಯ ಹೆಸರಿಟ್ಟಿದ್ದಾನೆ.

ಇದೇ ಸಮಾಧಿ ಮುಂದೆ ಪುಟ್ಟ ದೇವಾಲಯವನ್ನೂ ನಿರ್ಮಾಣ ಮಾಡಿ ಬರುವವರಿಗೆ ವಿಶ್ರಾಂತಿ ಪಡೆಯಲು ತಂಗುದಾಣ ಮಾಡಿದ್ದಾರೆ. ಜರೇಕಟ್ಟೆ ಗ್ರಾಮದವರಾಗಿರುವ ಇವರು, ಈಗ ದಾವಣಗೆರೆಯಲ್ಲಿ ಮನೆ ಮಾಡಿಕೊಂಡು ಅಲ್ಲೇ ಜೀವನ ಸಾಗಿಸುತ್ತಿದ್ದು, ಸಮಯ ಸಿಕ್ಕಾಗ ಈ ಸಮಾಧಿ ನಿರ್ಮಿಸಿರುವಂತ ಮರಳಿಮಣ್ಣಿಗೆ ಬಂದು ಕಾಲ ಕಳೆಯುತ್ತಾರೆ. ಅಲ್ಲದೇ ಇವರು ಅಸಹಾಯಕ ಜನರು ಹಾಗೂ ಪ್ರಾಣಿಗಳಿಗೆ ಹಣ್ಣು -ಹಂಪಲು ನೀಡಿ ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಜೀವನದಲ್ಲಿ ಬೇಸರಗೊಂಡು, ತನ್ನ ಸಾವಿನ ಮೊದಲೇ ಸಮಾಧಿಯನ್ನು ನಿರ್ಮಾಣ ಮಾಡಿಕೊಂಡಿದ್ದಾನೆ ಎಂಬುದು ತಿಳಿದು ಬಂದಿದೆ.ಇದಷ್ಟೇ ಅಲ್ಲದೇ ಇನ್ನೊಬ್ಬರ ಹಂಗಿಗಾಗಿ ಕೈಚಾಚೋ ಬದಲು, ತಾನು ದುಡಿದಂತ ಹಣದಲ್ಲಿಯೇ ತನ್ನ ಸಮಾಧಿಯನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ಅಲ್ಲದೇ ತಾನು ಸತ್ರೇ ಇದೇ ಸಮಾಧಿಯಲ್ಲಿ ಸಮಾಧಿ ಮಾಡಬೇಕು ಎಂಬುದಾಗಿಯೂ ತಿಪ್ಪಣ್ಣ ತನ್ನ ಮಕ್ಕಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.