DCGI ನಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ Covovax ನೀಡಲು ಅನುಮತಿ

ನವದೆಹಲಿ : ಸೀರಮ್ ಇನ್ಸ್ಟಿಟ್ಯೂಟ್ ನ covovax ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ DCGI ನಿಂದ ಅನುಮೋದನೆ ನೀಡಲಾಗಿದೆ.

 

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಅವರು, ತಮ್ಮ ಕಂಪನಿ ತಯಾರಿಸಿದ ಕೋವೋವ್ಯಾಕ್ಸ್ ಲಸಿಕೆಯನ್ನು ವಯಸ್ಕರಿಗೆ ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಡಿಸಿಜಿಐನಿಂದ ಅನುಮೋದನೆ‌ ನೀಡಲಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಪ್ರಯೋಗಗಳಲ್ಲಿ Novavax ಶೇ.90 ಕ್ಕಿಂತ ಹೆಚ್ಚು ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ. DCGI ಯಿಂದ ವಯಸ್ಕರಿಗೆ ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಕಿರಿಯ ವಯಸ್ಸಿನ ಗುಂಪುಗಳು ಶೀಘ್ರದಲ್ಲೇ ಲಸಿಕೆ ನೀಡಲಾಗುವುದು ಎಂದಿದ್ದಾರೆ.

Leave A Reply

Your email address will not be published.