ಕಡಬ : ನಿಗದಿತ ಮೊತ್ತಕ್ಕೆ ವ್ಯಾಪಾರ ಕುದುರಿಸಿ ಬಳಿಕ ದುಪ್ಪಟ್ಟು ಹಣ ಕೇಳಿದ ತಂಡ, ಮನೆಯವರಿಗೆ ಬೆದರಿಕೆ

ಕಡಬ: ಮನೆಯೊಂದಕ್ಕೆ ಕಿಟಿಕಿಯ ಪರದೆಯನ್ನು ಮಾರಾಟ ಮಾಡಲು ಮೂವರಿದ್ದ ಯುವಕರ ತಂಡವೊಂದು ಆಗಮಿಸಿ ನಿಗದಿತ ಮೊತ್ತಕ್ಕೆ ವ್ಯಾಪಾರ ಕುದುರಿಸಿ ಪರದೆಯನ್ನು ಕಿಟಿಕಿಗೆ ಅಳವಡಿಸಿದ ಬಳಿಕ ದುಪ್ಪಟ್ಟು ಹಣ ಕೇಳಿ ಕೊಡದಿದ್ದಾಗ ಮನೆಯವರಿಗೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಎಂಬಲ್ಲಿ ಬುಧವಾರ ನಡೆದಿದೆ.

ಸಬಳೂರು ಆಶೋಕ್ ರೈ ಎಂಬುವವರ ಮನೆಗೆ ಕೇರಳ ರಾಜ್ಯ ನೊಂದಣಿಯಾದ(ಕೆ ಎಲ್ 61 ಡಿ 5567 ) ಕಾರಿನಲ್ಲಿ ಆಗಮಿಸಿದ ಮೂವರು ಯುವಕರು ಆರಂಭದಲ್ಲಿ ಒಂದು ಪರದೆಗೆ 2000ರೂ ಎಂದು ವ್ಯಾಪಾರ ಕುದಿರಿಸಿದ್ದರು. ಮನೆಯವರು ಮೂರು ಪರದೆಯನ್ನು ಖರೀದಿಸಿದ್ದಾರೆ ತಕ್ಷಣ ಯುವಕರು ಕಿಟಿಕಿಗೆ ಪರದೆಗಳನ್ನು ಅಳವಡಿಸಿದ್ದಾರೆ.

ಕೆಲ್ಸ ಮುಗಿದ ಬಳಿಕ ಒಟ್ಟು 31 ಸಾವಿರ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆ ಆರಂಭದಲ್ಲಿ ತಿಳಿಸಿದ ಮೊತ್ತವನ್ನು ನೀಡಲಾಗುವುದು ಇಲ್ಲವಾದಲ್ಲಿ ಪದರೆ ತೆಗೆದುಕೊಂಡು ವಾಪಸ್ಸಾಗಿ ಎಂದು ಮನೆಯವರು ತಿಳಿಸಿದಾಗ ಇದಕ್ಕೆ ಒಪ್ಪದೆ ಮನೆಯವರೊಂದಿಗೆ ಯವಕರು ವಾಗ್ವದ ನಡೆಸಿ ಆಶೋಕ್ ರೈ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಾಳೆ ಮತ್ತೆ ಇನ್ನಷ್ಟು ಯುವಕರನ್ನು ಕರೆದುಕೊಂಡು ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಪರದೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ನಮಗೆ ರಕ್ಷಣೆ ನೀಡಬೇಕು ಮತ್ತು ಯುವಕರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಆಶೋಕ್ ರೈ ಅವರ ಪುತ್ರ ಪ್ರಶಾಂತ್ ರೈ ಕಡಬ ಠಾಣೆಗೆ ನೀಡಿದ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave A Reply

Your email address will not be published.