ಬೆಳ್ತಂಗಡಿ : ಮನೆಯ ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಆಭರಣ ಕಳ್ಳತನ |ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮನೆಯ ಬೀರುವಿನಲ್ಲಿಟ್ಟಿದ್ದ ಹಣ, ಹಾಗೂ ಚಿನ್ನಾಭರಣ ಕಳವಾದ ಘಟನೆ ನೆರಿಯಾ ಗ್ರಾಮದ ಕುಲೆನಾಡಿ ಎಂಬಲ್ಲಿ ನಡೆದಿದೆ.

 

ಚಂದ್ರಾವತಿ ಎಂಬವರ ಮನೆಯಿಂದ 65,000 ರೂ. ನಗದು ಮತ್ತು ಸುಮಾರು 1,75,000 ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.ಚಂದ್ರಾವತಿ ಅವರು-2021ರ ನ. 24ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಂಪಿನಿಂದ 2,47,000 ರೂ.ಸಾಲ ಪಡೆದಿದ್ದರು. ಆ ಪೈಕಿ 65,000 ರೂ.ಗಳನ್ನು ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟಿದ್ದರು. ಅಲ್ಲದೆ, 2021ರ ಸೆ. 6ರಂದು ಬೀರುವಿನಲ್ಲಿ ಆಭರಣ ಇಡುವ ಪೆಟ್ಟಿಗೆಯಲ್ಲಿ 24 ಗ್ರಾಂ ತೂಕದ ಲಕ್ಷ್ಮೀ ದೇವರ ಪದಕ ಇರುವ ಒಂದು ಚಿನ್ನದ ನೆಕ್ಲಸ್ ಹಾಗೂ ಇನ್ನೊಂದು ಡಬ್ಬದಲ್ಲಿ 20 ಗ್ರಾಂ ತೂಕದ ಬಾಣದ ಗುರುತಿಗೆ ಇಂಗ್ಲಿಷಿನಲ್ಲಿ ‘ಎಸ್’ ಎಂಬುದಾಗಿ ಬರೆದಿರುವ ಚಿನ್ನದ ಪದಕದ ಒಂದು ಚಿನ್ನದ ಸರ ಇಟ್ಟಿದ್ದರು.

ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಮಾರ್ಚ್ 8ರಂದು
ಬೆಳಗ್ಗೆ 9 ಗಂಟೆ ವೇಳೆಗೆ ಬೀರುವಿನಲ್ಲಿ ಇಟ್ಟಿದ್ದ ಹಣವನ್ನು
ತೆಗೆಯಲು ಹೋದಾಗ ಹಣ ನಾಪತ್ತೆಯಾಗಿದ್ದು,ಸಂಶಯಗೊಂಡು ಆಭರಣ ಇಟ್ಟಿದ್ದ ಡಬ್ಬಿಯನ್ನು ನೋಡಿದಾಗ ಚಿನ್ನದ ನೆಕ್ಲಸ್ ಹಾಗೂ ಚಿನ್ನದ ಸರ ಇರದನ್ನು ಗಮನಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವಾದ ಚಿನ್ನದ ಅಂದಾಜು ಮೌಲ್ಯ 175000 ರೂ. ಆಗಿದ್ದು,ನಗದು ಮತ್ತು ಆಭರಣ ಸೇರಿ ಒಟ್ಟು 2,40,000 ರೂ.ಗಳನ್ನು ಕಳೆದುಕೊಂಡಿದ್ದಾರೆ. ಸಂಬಂಧಿಯೋರ್ವ ಮನೆಗೆ ಆಗಾಗ ಬರುತ್ತಿದ್ದು ಆತ ಕಳವು ಮಾಡಿರುವ ಸಂಶಯ ವ್ಯಕ್ತವಾಗಿದೆ.

Leave A Reply

Your email address will not be published.