188 ಅನಾಥ ಮಕ್ಕಳ ನಕಲಿ ಹೆಸರಲ್ಲಿ 19 ಕೋಟಿ ನುಂಗಿದ ಭೂಪ | ಈತನ ವಂಚನೆಯ ಕಥೆ ಕೇಳಿ

ಸ್ವಯಂಸೇವಾ ಸಂಸ್ಥೆಗಳ ಹೆಸರಿನಲ್ಲಿ ಮಾಡುತ್ತಿರುವ ಮೋಸಕ್ಕೆ ಲೆಕ್ಕವೇ ಇಲ್ಲ ಬಿಡಿ. ಅನಾಥಾಶ್ರಮ, ವೃದ್ಧಾಶ್ರಮ ಎನ್ನುವ ಕಥೆಗಳನ್ನು ಕಟ್ಟಿ ವಿದೇಶಿ ಹಣವನ್ನು ಗಳಿಸಿ ಕೋಟ್ಯಾಧಿಪತಿಗಳಾಗುತ್ತಿದ್ದ ಹಲವಾರು ಸಂಘ ಸಂಸ್ಥೆಗಳಿಗೆ ಕೇಂದ್ರಸರಕಾರ ಇದಾಗಲೇ ಕಡಿವಾಣ ಹಾಕಿದೆ.

ಇದು ಭಾರತ ಮಾತಾದರೆ ಅತ್ತ ಲಂಡನ್ ನಲ್ಲಿಯೂ ಇಂಥದ್ದೇ ಒಬ್ಬ ಖದೀಮ ಇದೀಗ ಸಿಕ್ಕಿಬಿದ್ದಿದ್ದಾನೆ. ಒಂದಲ್ಲ ಎರಡಲ್ಲ ಬರೋಬ್ಬರಿ 19 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ವಂಚಿಸಿದ್ದಾನೆ. 188 ಮಕ್ಕಳನ್ನು ಸೃಷ್ಟಿಸಿ ಹಲವಾರು ವರ್ಷಗಳಿಂದ ಈತ ಮೋಸ ಮಾಡುತ್ತಾ ಬಂದಿದ್ದಾನೆ.

ಈತನ ಹೆಸರು ಅಲಿ ಬಾಮಾ ಮೊಹಮ್ಮದ್. 40 ವರ್ಷ. ಲಂಡನ್ ನಲ್ಲಿ ಅನಾಥ ಮಕ್ಕಳನ್ನು ಬೆಳೆಸುವುದಿದ್ದರೆ ಸರಕಾರ ಹಣ ನೀಡುತ್ತದೆ. ಮಾತ್ರವಲ್ಲದೇ ತೆರಿಗೆ ವಿನಾಯ್ತಿ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೇ ಚಾಳಿ ಮಾಡಿಕೊಂಡ ಈತ 188 ನಕಲಿ ಮಕ್ಕಳನ್ನು ತಾನು ಸಾಕುತ್ತಿರುವುದಾಗಿ ಹೇಳಿದ್ದಾನೆ. 188 ಹೆಸರುಗಳನ್ನು ದಾಖಲೆಗಳಲ್ಲಿ ತೋರಿಸಿ 19 ಕೋಟಿ ರೂಪಾಯಿ ವಂಚಿಸಿದ್ದಾನೆ.

ಈತನ ವಿರುದ್ಧ ಈಗ ಕೇಸ್ ದಾಖಲಾಗಿದೆ.

Leave A Reply

Your email address will not be published.