12000 ವರ್ಷಗಳಷ್ಟು ಹಳೆಯ ನಗರ ಪತ್ತೆ ಮಾಡಿದ ವಾಸ್ತುಶಿಲ್ಪಿ|44 ಬಾರಿ ಭೇಟಿ ನೀಡಿ ಸಂಶೋಧನೆ ಮಾಡಿದ ನಗರ ಹೇಗಿದೆ ಗೊತ್ತಾ!?|ಇವರ ಸಂಶೋಧನೆ ಕುರಿತು ಇತರ ತಜ್ಞರಿಗಿರುವ ಅಭಿಪ್ರಾಯ ಇಲ್ಲಿದೆ ನೋಡಿ!
ಇಂದು ಜಗತ್ತು ಎಷ್ಟು ಮುಂದುವರಿದರೂ ಹಿಂದಿನ ಕಾಲದ ಕುರುಹುಗಳ ಪತ್ತೆ ಆಗುತ್ತಲೇ ಇದೆ. ಚಿಕ್ಕ ವಸ್ತುಗಳಿಂದ ಹಿಡಿದು ಅನೇಕ ವಾಸ್ತುಶಿಲ್ಪಗಳು,ಕೆತ್ತನೆಗಳು ಇಂದಿಗೂ ಕಾಣ ಸಿಗುತ್ತದೆ.ಪ್ರಪಂಚ ಮುಂದುವರಿದಂತೆ ಸಂಶೋಧಕರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಸಂಶೋಧನೆಗಳು ಅಧಿಕವಾಗಿ ಕಾಣಸಿಗುತ್ತಿದೆ. ಇದರಿಂದಾಗಿ ಅನೇಕ ಹಿಂದಿನ ಕಾಲದಲ್ಲಿ ನಡೆದ ಆಗು ಹೋಗುಗಳನ್ನು ಪತ್ತೆ ಮಾಡುವಂತಾಗಿದೆ.
ಇದೀಗ ಅಮೆರಿಕದ ವಾಸ್ತುಶಿಲ್ಪಿ ಕ್ರಾಕ್ ಪಾಟ್ ಜಾರ್ಜ್ ಗೆಲೆ ಎಂಬವರು ಸಮುದ್ರದಾಳದಲ್ಲಿ 12,000 ವರ್ಷಗಳಷ್ಟು ಹಳೆಯ ನಗರವನ್ನು ನೋಡಿದ್ದು ಪತ್ತೆ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.ಸದ್ಯ ಇವರ ಹೇಳಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಗಲ್ಫ್ ಆಫ್ ಮೆಕ್ಸಿಕೋದಲ್ಲಿರುವ ಚಾಂಡ್ಲೂರ್ ದ್ವೀಪಗಳಲ್ಲಿ ಪುರಾತನ ನೀರೊಳಗೆ ನಗರದ ಅವಶೇಷಗಳಿವೆ ಎಂದು ಜಾರ್ಜ್ ಗೆಲೆ ಹೇಳುತ್ತಾರೆ.
ಸಮುದ್ರದಾಳದಲ್ಲಿ ಪ್ರಾಚೀನ ನಗರಗಳಿಗೆ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳಿವೆ. ಅಲ್ಲಿ ಕೆಲ ಪಿರಮಿಡ್ ಸಹ ಪತ್ತೆಯಾಗಿವೆ. ಈಗಾಗಲೇ ಪ್ರಾಚೀನ ನಗರ ಪತ್ತೆಯಾದ ಸ್ಥಳಕ್ಕೆ 44 ಬಾರಿ ಭೇಟಿ ನೀಡಿದ್ದೇನೆ ಎಂದು ಜಾರ್ಜ್ ಗೆಲೆ ಹೇಳಿಕೊಂಡಿದ್ದಾರೆ. ಅಂದು ನಿರ್ಮಿಸಲಾದ ಕಟ್ಟಡಗಳು ಅವಶೇಷಗಳಾಗಿ ಬದಲಾಗಿವೆ ಎಂದು ಹೇಳಿದ್ದಾರೆ.
12,000 ವರ್ಷಗಳಷ್ಟು ಹಳೆಯದಾದ ನಗರವನ್ನು ಕಂಡುಹಿಡಿದಿರುವ ಜಾರ್ಜ್ ಗೆಲೆ ಅವರ ಹೇಳಿಕೆಯನ್ನು ಹೆಚ್ಚಿನ ತಜ್ಞರು ಒಪ್ಪಿಕೊಂಡಿಲ್ಲ. ನೀರಿನಲ್ಲಿ ಕಂಡು ಬಂದಿರುವ ಗ್ರಾನೈಟ್ ನಗರದ ಮಧ್ಯ ಭಾಗದಲ್ಲಿ ಪಿರಮಿಡ್ ಕೂಡ ಇದೆ ಎಂದು ಜಾರ್ಜ್ ಗೆಲೆ WWL-TV ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ನೂರಾರು ಕಟ್ಟಡಗಳು ಮರಳು ಮತ್ತು ಹೂಳಿನಿಂದ ಆವೃತವಾಗಿದ್ದು,ಅವುಗಳು ಗಿಜಾದ ಗ್ರೇಟ್ ಪಿರಮಿಡ್ ಗೆ ಸಂಬಂಧಿಸಿವೆ.
‘ಡೈಲಿ ಸ್ಟಾರ್’ ಪ್ರಕಾರ, ಗೆಲೆ ಅವರು ಸುಮಾರು 50 ವರ್ಷಗಳಿಂದ ‘ಪ್ರಮುಖ ಕಟ್ಟಡಗಳ ಅವಶೇಷಗಳು’ ಮತ್ತು ‘ಮಹಾ ಪಿರಮಿಡ್ ವಿಷಯಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಇತ್ತೀಚೆಗೆ ಸಮುದ್ರಕ್ಕೆ ಹೋದಾಗ 12,000 ವರ್ಷಗಳಷ್ಟು ಹಳೆಯದಾದ ಗ್ರಾನೈಟ್ ಸಿಟಿ ಸಿಕ್ಕಿದೆ ಎಂದು ಹೇಳಿದ್ದಾರೆ.
ಜಾರ್ಜ್ ಗೆಲೆ ಅವರು ನೋಡಿದ ನಗರದ ಬಗ್ಗೆ ಈ ಹಿಂದೆಯೂ ಹಲವು ಚರ್ಚೆಗಳು ನಡೆದಿದ್ದು,ಇಲ್ಲಿನ ಸ್ಥಳೀಯ ಮೀನುಗಾರರು ತಮ್ಮ ಬಲೆಯಲ್ಲಿ ವಿಚಿತ್ರ ಬಂಡೆಗಳು ಸಿಕ್ಕಿ ಬೀಳುತ್ತಿರುವ ಬಗ್ಗೆ ಹಲವು ಬಾರಿ ಮಾಹಿತಿ ನೀಡುತ್ತಲೇ ಇರುತ್ತಾರೆ.ನೀರಿನಲ್ಲಿ ಇಷ್ಟು ದಪ್ಪ ಮತ್ತು ಗಟ್ಟಿಯಾದ ಗ್ರಾನೈಟ್ ರಚನೆಯನ್ನು ಯಾರು ನಿರ್ಮಿಸಬಹುದು ಎಂಬ ಪ್ರಶ್ನೆಗಳು ಉದ್ಭವಿಸಿದವು. ಈ ಪಿರಮಿಡ್ ರಚನೆಯ ಮೂಲ, ವಯಸ್ಸು ಮತ್ತು ಉದ್ದೇಶದ ಬಗ್ಗೆ ಗೆಲೆ ಆಸಕ್ತಿ ಹೊಂದಿದ್ದು, ತಮ್ಮ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆದರೆ ಕೆಲ ತಜ್ಞರು ಗೆಲೆ ಅವರ ಶೋಧನೆ ಮತ್ತು ಅವರ ವಾದವನ್ನು ಅನುಮಾನದಿಂದಲೇ ನೋಡುತ್ತಿದ್ದಾರೆ.