ಉಡುಪಿ : ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ಹೋದ ಯುವಕ ಸಮುದ್ರಪಾಲು|

ಉಡುಪಿ : ಸಮುದ್ರದಲ್ಲಿ ಈಜಲೆಂದು ತೆರಳಿದ್ದ ಯವಕನೋರ್ವ ಶವವಾಗಿ ಪತ್ತೆಯಾದ ಘಟನೆ ಕುಂದಾಪುರದ ಬೈಂದೂರಿನಲ್ಲಿ ನಡೆದಿದೆ.

 

ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರುಪಾಲಾಗಿದ್ದಾನೆ. ಈ ಘಟನೆ ಕುಂದಾಪುರದ ಬೈಂದೂರಿನಲ್ಲಿರುವ ಸೋಮೇಶ್ವರ ಬೀಚ್ ನಲ್ಲಿ ನಡೆದಿದೆ.

ಬೈಂದೂರು ಸಮೀಪದ ಬವಳಾಡಿ ನಿವಾಸಿ ಶಶಿಧರ್ ದೇವಾಡಿಗ ( 23) ನೀರುಪಾಲಾಗಿ ಮೃತಪಟ್ಟ ಯುವಕ. ಘಟನೆಯಲ್ಲಿ ಮೃತ ಶಶಿಧರ್ ದೇವಾಡಿಗನ ನಾಲ್ವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.