ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ !! | ಸಿಕ್ಕಸಿಕ್ಕ ಪೋಸ್ಟ್ ಗಳಿಗೆ ಕಮೆಂಟ್ ಮಾಡುವಾಗ ಇರಲಿ ಎಚ್ಚರ

ಇಂದಿನ ಯುಗ ಯಾವ ಮಟ್ಟಿಗೆ ತಲುಪಿದೆ ಎಂದರೆ ಪ್ರತಿಯೊಂದು ವಿಷಯವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮಟ್ಟಿಗೆ ಬೆಳೆದಿದೆ. ಪಕ್ಕದಲ್ಲಿರೋರಿಗೂ ಅರಿಯದ ವಿಷಯಗಳು ಸ್ಟೇಟಸ್ ನಲ್ಲಿ ಕಾಣಸಿಗುತ್ತದೆ.ಕೆಲವೊಂದು ಬಾರಿ ಈ ರೀತಿಯ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ ಗಳಿಂದ ಅದೆಷ್ಟೋ ಜನರಿಗೆ ಮನಸ್ತಾಪ ಕೂಡ ಆಗಿದ್ದು ಇದೆ. ಆದರೆ ಇಲ್ಲೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಕ್ಕೆ ಬಳಿಕ ಅಲ್ಲಿ ನಡೆದಿದ್ದು ಏನು ಗೊತ್ತೇ!?

ಹೌದು. ಕೇವಲ ಒಂದು ಕಮೆಂಟ್ ಸಲುವಾಗಿ ಕೊಲೆಯೇ ನಡೆದು ಹೋಗಿದೆ.ಅಷ್ಟಕ್ಕೂ ಈ ಭಯಾನಕ ಘಟನೆ ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಡೆಹ್ರಾಡೂನ್​​ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ಎಂಬಾಕೆಯನ್ನು ಆಕೆಯ ಸಹಪಾಠಿ ವಿದ್ಯಾರ್ಥಿ ಆದಿತ್ಯ ತೋಮರ್ ಎಂಬಾತ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾನೆ.ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ತನ್ನ ಸ್ನೇಹಿತೆಯೊಂದಿಗೆ ರಾಯ್​ಪುರ ಠಾಣೆ ವ್ಯಾಪ್ತಿಯ ದಾದಾ ನಗರದಲ್ಲಿ ಹಾಸ್ಟೆಲ್​​ವೊಂದರಲ್ಲಿ ವಾಸವಾಗಿದ್ದಳು. ಅಲ್ಲಿಂದಲೇ ಕಾಲೇಜ್‌ಗೆ ಬರುತ್ತಿದ್ದಳು. ಆಕೆಯನ್ನು ಹುಡುಕಿ ಹಾಸ್ಟೆಲ್‌ಗೇ ಬಂದಿದ್ದ ಆದಿತ್ಯ, ಆಕೆಯನ್ನು ಕೊಂದು ಎಸ್ಕೇಪ್‌ ಆಗಿದ್ದಾನೆ. ಎದೆಗೆ ಗುಂಡು ತಗುಲಿದ್ದರಿಂದ ವಂಶಿಕಾ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಳು.

ಅಂದಹಾಗೆ ಮೃತ ವಂಶಿಕಾ ಹಾಗೂ ಆರೋಪಿ ಆದಿತ್ಯ ಇಬ್ಬರೂ ಒಂದೇ ಕಾಲೇಜ್‌ನ ವಿದ್ಯಾರ್ಥಿಗಳು. ಇಬ್ಬರೂ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿದ್ದರು. ಈಗೊಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಳು. ಆ ಫೋಟೊಕ್ಕೆ ಆದಿತ್ಯ ಒಂದು ಕಮೆಂಟ್​ ಮಾಡಿದ್ದ. ಇದೇ ಕಮೆಂಟ್​ ವಿಚಾರಕ್ಕೆ ವಂಶಿಕಾ ಮತ್ತು ಆದಿತ್ಯ ನಡುವೆ ಗಲಾಟೆಯಾಗಿತ್ತು. ವಂಶಿಕಾ ತನ್ನ ಸ್ನೇಹಿತರ ಬಳಿಯೂ ಈ ಬಗ್ಗೆ ಹೇಳಿಕೊಂಡಿದ್ದಳು. ಆದಿತ್ಯ ಮತ್ತು ವಂಶಿಕಾ ಸಹಪಾಠಿಗಳಾಗಿದ್ದರಿಂದ ಸಹಜವಾಗಿ ಈಕೆಗೆ ಸ್ನೇಹಿತರಾಗಿದ್ದವರೇ ಅವನಿಗೂ ಗೊತ್ತಿರುವವರೇ ಆಗಿದ್ದರು. ವಂಶಿಕಾ ಸ್ನೇಹಿತರೆಲ್ಲ ಸೇರಿ, ಆದಿತ್ಯನ ಬಳಿ ಕ್ಷಮೆ ಕೇಳಿಸಿದ್ದರೂ. ಅದೂ ಕೂಡ ಆತ ವಂಶಿಕಾಳ ಕಾಲುಮುಟ್ಟಿ ಕ್ಷಮೆ ಕೇಳುವಂತೆ ಮಾಡಿದ್ದರು.

ಸ್ನೇಹಿತರ ಮುಂದೆ ವಂಶಿಕಾ ತನಗೆ ಅಪಮಾನ ಮಾಡಿದಳು ಅಂತ ಆದಿತ್ಯ ಆಕ್ರೋಶ ಗೊಂಡಿದ್ದು,ಇದೇ ವಿಚಾರ ಕಾಲೇಜ್‌ನಲ್ಲಿ ಮತ್ತೆ ಮತ್ತೆ ಚರ್ಚೆಯಾಗಿದ್ದರಿಂದ ಇನ್ನಷ್ಟು ಸಿಟ್ಟು ನೆತ್ತೇಗೇರಿತ್ತು. ಹೀಗಾಗಿ ಕೋಪದ ಕೈಗೆ ಬುದ್ಧಿ ಕೊಟ್ಟು ಗುಂಡು ಹೊಡೆದು ವಂಶಿಕಾಳನ್ನು ಸಾಯಿಸಿದ್ದಾನೆ.ವಂಶಿಕಾ ಸಾವನ್ನಪ್ಪುತ್ತಿದ್ದಂತೆ ಭಯಪಟ್ಟ ಆದಿತ್ಯ ಗನ್ ಅಲ್ಲೇ ಎಸೆದು, ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದ.

ಘಟನೆ ನಡೆದ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿ,ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದ್ದು,ವಿಚಾರಣೆ ವೇಳೆ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.

Leave A Reply

Your email address will not be published.