ಡಿಸಿಸಿ ಬ್ಯಾಂಕ್‌ನ ಶಾಖೆಯೊಂದರಿಂದ ರೂ.5 ಕೋಟಿ ಮೌಲ್ಯದ ನಗದು,ಚಿನ್ನಾಭರಣ ಕಳ್ಳತನ

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಸಂಘದ ಸವದತ್ತಿ ತಾಲೂಕಿನ ಮುರಗೋಡ ಶಾಖೆಯಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ಕಳ್ಳತನ ಆಗಿರುವ ಘಟನೆ ಆದಿತ್ಯವಾರ ಬೆಳಗ್ಗೆ ನಡೆದಿದೆ.

 

ಸುಮಾರು 4.5 ಕೋಟಿ ರೂ. ನಗದು ಹಾಗೂ 76 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿದೆ. ಒಟ್ಟು ಸುಮಾರು 5 ಕೋಟಿ ರೂ. ಮೌಲ್ಯದ ಕಳ್ಳತನ ಆಗಿದೆ.

ಸ್ಥಳಕ್ಕೆ ಪೊಲೀಸರು ಹಾಗೂ ಬಿಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳದ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರತಿದಿನ ಹಗಲು ರಾತ್ರಿ ಬಿಡಿಸಿಸಿ ಬ್ಯಾಂಕ್ ನ ಮುರಗೋಡ ಶಾಖೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಇರುತ್ತಿದ್ದು, ಆದರೆ ಶನಿವಾರ ರಾತ್ರಿ ಸೆಕ್ಯೂರಿಟಿ ಗಾರ್ಡ್ ಬಂದಿರಲಿಲ್ಲ. ಇದೇ ಸಮಯಾವಕಾಶವನ್ನು ಬಳಸಿಕೊಂಡು ಕಳ್ಳತನ ಮಾಡಲಾಗಿದೆ.

Leave A Reply

Your email address will not be published.