ಹೆಣ್ಣಾಗಿ ಮುಂದಿನ ಜನ್ಮದಲ್ಲಿ ಹುಟ್ಟಲು ಇಷ್ಟವಿಲ್ಲ- ನೊಂದು ನುಡಿದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ ಎಂದರೆ ತಪ್ಪಾಗಲಾರದು. ಈ ಸ್ಟಾರ್ ಪಟ್ಟವನ್ನು ಅವರು ಎಂಜಾಯ್ ಮಾಡ್ತಾ ಇದ್ದಾರೆ. ಆದರೂ ಈ ಖ್ಯಾತಿ ಒಳ್ಳೆಯ ಹೆಸರನ್ನು ಗಳಿಸಿದರೂ ರಶ್ಮಿಕಾ ಅವರು ಒಂದು ನೋವನ್ನು ಹೇಳಿಕೊಂಡಿದ್ದಾರೆ. ಏನೆಂದರೆ ಅವರಿಗೆ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲು ಇಷ್ಟವಿಲ್ಲವಂತೆ. ಅದಕ್ಕೆ ಕಾರಣ ಕೂಡಾ ನೀಡಿದ್ದಾರೆ. ಅದೇನೆಂದರೆ,

‘ಅಡಕವಾಳು ಮೀಕು ಜೊಹ್ರಾಲು’ ಹೆಸರಿನ ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಹೊಂದಿದೆ. ಈ ಸಿನಿಮಾದ ನಾಯಕಿಯಾಗಿ ನಟಿಸಿದ್ದಾರೆ ರಶ್ಮಿಕಾ. ಪ್ರಚಾರದ ಭಾಗವಾಗಿ ಮಾಧ್ಯಮದಲ್ಲಿ ಮಾತನಾಡಿದ ರಶ್ಮಿಕಾ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲ್ಲ. ಬದಲಾಗಿ ಗಂಡು ಮಗುವಾಗಿ ಜನಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಓರ್ವ ಮದುಮಗಳಾಗಿ ಹೆಣ್ಣುಮಗಳು ಎದುರಿಸುವ ಕಷ್ಟ ನೋಡಿ ರಶ್ಮಿಕಾ ಈ ರೀತಿಯ ಮಾತನ್ನಾಡಿದ್ದಾರೆ.

Leave A Reply

Your email address will not be published.