ಬೆಳ್ತಂಗಡಿ : ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಲಾರಿ | ಬೈಕ್ ನಲ್ಲಿದ್ದ ತಾಯಿ ಹಾಗೂ 4 ವರ್ಷದ ಮಗು ಗಂಭೀರ

Share the Article

ಬೆಳ್ತಂಗಡಿ : ಇಲ್ಲಿಗೆ ಸಮೀಪದ ಗುರುವಾಯನಕೆರೆ ಶಕ್ತಿನಗರದಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿರುವ ಘಟನೆಯೊಂದು ಸಂಭವಿಸಿದೆ.

ಸುಗಮ ಪಾರ್ಸೆಲ್ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ನಾಲ್ಕು ವರ್ಷದ ಮಗು ಮತ್ತು ತಾಯಿಗೆ ಗಂಭೀರ ಗಾಯವಾಗಿದೆ. ಲಾರಿಯವನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ. ಲಾರಿ ಚಾಲಕ ಓಡಲು ಪ್ರಯತ್ನ ಪಟ್ಟಿದ್ದು ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ತಾಯಿ ಮತ್ತು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply