ಯೋಗಾಸನದಲ್ಲಿ ಉತ್ಕೃಷ್ಟತೆ ಸಾಧಿಸುತ್ತಿರುವ ಶಿವಾನಿ ಶಿವಾನಂದ್ ಶೆಟ್ಟಿ, ಉಡುಪಿ

ಮಹತ್ತರವಾದುದ್ದನ್ನು ಕರಗತ ಮಾಡಿಕೊಳ್ಳಲು ಇರುವ ಏಕೈಕ ಸಾಧನ ಎಂದರೆ ಎಡೆಬಿಡದ, ನಿರಂತರವಾದ ಸಾಧನೆ ಮಾತ್ರ. ಅನ್ಯಥಾ ಮಹತ್ವತೆಯ ಶಿಖರವೇರಲು ಸಾಧ್ಯವಿಲ್ಲ. ಶರ ಪ್ರಯೋಗದಲ್ಲಿ ಸವ್ಯಸಾಚಿ ಎಂದೆಣಿಸಿದವನು ಅರ್ಜುನ. ಅದಕ್ಕಾಗಿ ಅವನು ಪಟ್ಟ ಶ್ರಮ, ಸವೆಸಿದ ಹಾದಿ, ಬಳಸಿದ ತಂತ್ರಗಳು, ಜಪಿಸಿದ ಮಂತ್ರಗಳು, ಮಾಡಿದ ಅಧ್ಯಯನಗಳು, ಪ್ರಯೋಗಾತ್ಮಕ ಪರೀಕ್ಷೆಗಳು ಅಗಣಿತವಾದುದು. ಗುರು ದ್ರೋಣಾಚಾರ್ಯರು ನೂರೈದು ಮಂದಿಗೆ ನಿಯಮಿತ ಸಮಯದಲ್ಲಿ ಕಲಿಸುವಾಗ ಮಾತ್ರ ಕಲಿತವನಲ್ಲ. ಅವನ ನಡೆ, ನುಡಿ, ಯೋಚನೆ, ಯೋಜನೆ, ಚಿಂತನ, ಮಂಥನಗಳು ಅನುಕ್ಷಣ, ಅನುದಿನ, ಅನವರತ ಶರಾನುಸಂಧಾನವೇ ಆಗಿತ್ತು.


ಅವನು ನಿಂತಲ್ಲಿ ಕುಂತಲ್ಲಿ, ಅಷ್ಟೇ ಏಕೆ ಊಟ ಮಾಡುವಾಗಲು ಬಾಣ ಪ್ರಯೋಗದ ಕುರಿತೇ ಯೋಚಿಸುತ್ತಿದ್ದ ಎಂದು ಮಹಾಭಾರತದಲ್ಲಿ ಉಲ್ಲೇಖವಿದೆ. ನಿರಂತರ ಅವಿರತ ಸಾಧನೆಯ ಫಲವಾಗಿ ಸರ್ವ ಶ್ರೇಷ್ಠ ಧನುರ್ಧಾರಿಯಾಗಿ
ಎರಡೂ ಕರಗಳಿಂದ ಶರಾನುಸಂಧಾನ ಮಾಡಬಲ್ಲ ಸವ್ಯಸಾಚಿ ಎಂದು ಕರೆಯಲ್ಪಟ್ಟವನು. ಈ ಖ್ಯಾತಿ, ಪ್ರಖ್ಯಾತಿ, ದಿವ್ಯತೆ, ಭವ್ಯತೆ,ಪ್ರಾಮುಖ್ಯತೆ, ಜನಪ್ರಿಯತೆ, ಸಾರ್ಥಕತೆ ಪಾರ್ಥನಿಗೆ ಪ್ರಾಪ್ತವಾದ್ದದ್ದು ಅನವರತದ ಏಕಾಗ್ರತೆಯ ಸಾಧನೆಯಿಂದ. ಹೀಗೆ ಯಾವುದೇ ಕ್ಷೇತ್ರದಲ್ಲಿ ಕಲಿಯಬೇಕು, ಸಾಧಿಸಬೇಕೇಂದರೆ ಆ ಕುರಿತದಾದ ತುಡಿತ ಬೇಕು. ಆ ತುಡಿತಕ್ಕೆ ತಕ್ಕಂತೆ ನೇಪಥ್ಯದಲ್ಲಿ ದುಡಿತವಿದ್ದರೆ ಸಾಧನೆ ಒಂದಲ್ಲ ಒಂದು ದಿನ ಮುನ್ನೆಲೆಗೆ ಬಂದು ಪ್ರಚುರಗೊಳ್ಳುತ್ತದೆ. ಯೋಗ ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ. ವೇದ ಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಪತಂಜಲಿ ಮುನಿಗಳ 'ಯೋಗಸೂತ್ರ' ಕೃತಿಯು ಯೋಗಾಸನಗಳ ಕುರಿತ ಅಧಿಕೃತ ದಾಖಲೆ. ಇಂದು ಭಾರತವು ಯೋಗಾಸನದ ಕ್ಷೇತ್ರದಲ್ಲಿ ವಿಶ್ವಕ್ಕೆ ಗುರುಸ್ಥಾನದಲ್ಲಿದೆ. ಬಾಬಾ ರಾಮದೇವ್ ಅವರು ಯೋಗಾಸನಗಳ ಮಹತ್ವವನ್ನು ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ಪ್ರಸ್ತುತ ಪಡಿಸುತ್ತ ಬರುತ್ತಿದ್ದಾರೆ. ಸನ್ಮಾನ್ಯ ನರೇಂದ್ರ ಮೋದಿಜಿಯವರು ಪ್ರಧಾನಿಯಾದ ಮೇಲಂತೂ ಯೋಗಕ್ಕೆ ವಿಶ್ವಮಾನ್ಯತೆ ದೊರಕಿದೆ. 2015ರಿಂದ ಪ್ರತಿ ವರ್ಷ ಜೂನ್, 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕುರಿತು 2014ರಲ್ಲಿ ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅತ್ಯಂತ ಕಠಿಣ ಮತ್ತು ಕಲಾತ್ಮಕ ಯೋಗಾಸನಗಳ ಕ್ಷೇತ್ರದಲ್ಲಿ ಶಿವಾನಿ ಶಿವಾನಂದ್ ಶೆಟ್ಟಿ ಎಂಬ ಒಂಬತ್ತು ವರ್ಷದ ಪುಟ್ಟ ಬಾಲಕಿಯ ಸಾಧನೆ ಅಪೂರ್ವ ಹಾಗೂ ಅದ್ಭುತ. ಒಂದು ಮಾತಿದೆ. "ಮಾತು ಸಾಧನೆಯಾಗಬಾರದು. ಸಾಧನೆಯೇ ಮಾತನಾಡಬೇಕು" ಶಿವಾನಿಯ ಸಾಧನೆ ಮಾತನಾಡುತ್ತಿದೆ. ಈ ಮಾತು ಅತ್ತಲು, ಇತ್ತಲು, ಸುತ್ತಲು ಪಸರುತ್ತ, ಅನುರಣನಿಸುತ್ತ ಊರಿನ, ನಾಡಿನ ಮಾತಾಗುತ್ತಿದೆ. ಕೇವಲ ಒಂಬತ್ತರ ಹರೆಯದ ಶಿವಾನಿಯ ಸಾಧನೆಗಳ ದಾಖಲೆಗಳು ಸರಮಾಲೆಯಾಗುತ್ತಿರುವುದು ರೋಚನೀಯ ಮತ್ತು ಶ್ಲಾಘನೀಯ. ಶ್ರೀಮತಿ ಸುಜಾತ ಶೆಟ್ಟಿ, ಹೆಬ್ರಿ ಹಾಗೂ ಶ್ರೀ ಶಿವಾನಂದ್ ಶೆಟ್ಟಿ, ಬೇಳಂಜೆ ದಂಪತಿಗಳ ಪ್ರೀತಿಗೆ ಅಂಕುರಿಸಿದ ಏಕಮಾತ್ರ ತನುಜಾತೆ ಶಿವಾನಿ. ಅವಧಿ ಪೂರ್ವ ಪ್ರಸವದಿಂದ ಜನಿಸಿ ಬಸವಳಿದವಳು. ಹಸುಗೂಸು ತಾಯಿಂದ ದೂರವಾಗಿ ತಬ್ಬಲಿಯಂತೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಕಳೆದ ಒಂದು ವರ್ಷಕ್ಕಿಂತಲೂ ಅಲ್ಪ ಅವಧಿಯಲ್ಲಿ ಶಿವಾನಿ ಕಲಾತ್ಮಕ ಯೋಗಾಸನಗಳ ಮೂಲಕ ಏರಿದ ಎತ್ತರ, ಪರಿಕ್ರಮಿಸಿದ ಆಳ ಅಗಲ, ಊರಿದ ಮೈಲುಗಲ್ಲುಗಳು ಕೇಳುಗರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ಯೋಗ ವಿದ್ಯೆಯನ್ನು ಲೀಲಾಜಾಲವಾಗಿ ಕರವಶಮಾಡಿಕೊಳ್ಳುತ್ತಿರುವ ಮೂಲಕ ಶಿವಾನಿ ಒಸರುತ್ತ, ಪಸರುತ್ತ, ಪರಿಮಳಿಸುತ್ತ, ನಾಲ್ದೆಸೆಯಲ್ಲಿ ಖ್ಯಾತಳಾಗುತ್ತಿದ್ದಾಳೆ. ಜನನಿ ಜನಕರು ಮನದಲ್ಲಿ ಆನಂದ ತುಂದಿಲರಾಗಿದ್ದಾರೆ. ಮೊದಲು ತಂದೆಯವರು ಮಾಡುವ ಕೆಲವೊಂದು ಯೋಗಾಸನಗಳನ್ನು ನೋಡಿಯೇ ಕಲಿತವಳು ಶಿವಾನಿ. ಪ್ರಸ್ತುತ ನಿಪುಣ, ಪರಿಣಿತ, ಹಾಗೂ ಹೆಸರಾಂತ ಯೋಗಗುರು ಕಾರ್ಕಳ ಶ್ರೀ ನರೇಂದ್ರ ಕಾಮತ್ ಅವರ ನೆಚ್ಚಿನ ಶಿಷ್ಯೆ. ಪುಟ್ಟ ಬಾಲಕಿ ಹೆತ್ತವರ ಹಾಗೂ ಗುರುಗಳ ನಿರೀಕ್ಷೆಯನ್ನು ಮೀರಿ, ಏರಿ ಬೆಳೆಯುತ್ತಿದ್ದಾಳೆ. ಗುರು ಕಲಿಸುವ ಪ್ರತಿಯೊಂದು ಆಸನಗಳನ್ನು ಅಂಜಲಿಬದ್ಧಳಾಗಿ ವೀಕ್ಷಿಸಿ, 'ಅಂಗೈಯಲ್ಲಿ ನೆಲ್ಲಿಕಾಯಿ' ಎಂಬ ನಾಣ್ಣುಡಿಯಂತೆ ಕಲಿಯುತ್ತಿದ್ದಾಳೆ. ಅತ್ಯಂತ ಕಠಿಣ ಮತ್ತು ಕಲಾತ್ಮಕ ಯೋಗಾಸನಗಳನ್ನು ಗುರುಗಳು ಕಲಿಸಿದಾಕ್ಷಣ ಕಲಿಯುವ ಮಟ್ಟಕ್ಕೆ ದೈಹಿಕವಾಗಿ, ಮಾನಸಿಕವಾಗಿ ತನ್ನನ್ನು ತಾನು ಸಂಪೂರ್ಣವಾಗಿ ಒಗ್ಗಿಸಿಕೊಳ್ಳುವ ಕಲೆ ಅವಳಿಗೆ ಸಿದ್ಧಿಸಿದೆ ಎಂದರೆ ಉತ್ಪ್ರೇಕ್ಷೆ ಆಗಲಾರದು. ನಿಖರವಾದ ಮಾನಸಿಕ ಏಕಾಗ್ರತೆ ಮತ್ತು ದೈಹಿಕ ಶ್ರಮ ಬೇಡುವ ಕಠಿಣ ತರದ ಎಲ್ಲ ಯೋಗಾಸನಗಳನ್ನು ಅತ್ಯಂತ ಸುಲಲಿತವಾಗಿ ಕರಗತ ಮಾಡಿಕೊಳ್ಳುತ್ತಾಳೆ. ಮುಖ್ಯವಾಗಿ ಪಿಂಚ ವೃಶ್ಚಿಕಾಸನ, ಮುಕ್ತ ವೃಶ್ಚಿಕಾಸನ, ಪಿಂಚ ಮಯೂರಾಸನ,

ಊರ್ದ್ವಮುಖ ಟಿಟ್ಟಿಭಾಸನ, ಮರುಡಾಸನ, ಕೈಲಾಸಾಸನ, ಋಚಿಕಾಸನ, ಕುಕ್ಕುಟಾಸನ ಇತ್ಯಾದಿ ಇತ್ಯಾದಿಗಳು. ಶಿವಾನಿಯು ಅಲ್ಪ ಅವಧಿಯಲ್ಲಿ ಸಾಧಿಸಿರುವ ಸಾಧನೆಗಳನ್ನು ಪುಟ್ಟ ಲೇಖನದಲ್ಲಿ ದಾಖಲಿಸುವುದು ಕಷ್ಟ ಸಾಧ್ಯ. ಜನವರಿ, 2022ರಲ್ಲಿ ನಡೆದ ಆನ್ಲೈನ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ ಹಾಗೂ ಅಂತರಾಷ್ಟ್ರೀಯ ಕಾರ್ಯಗಾರದಲ್ಲಿ ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಅಂಡಮಾನ್ ನಿಕೋಬರ್ ದ್ವೀಪ ಸಮೂಹದ ರಾಜಧಾನಿ ಫೋರ್ಟ್ ಬ್ಲೇರ್ ಇಲ್ಲಿ ನಡೆದ 2021-22 ಸಾಲಿನ ಆರನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಶಿವಮೊಗ್ಗದ ವರ್ಷಿಣಿ ಯೋಗ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ಏರ್ಪಡಿಸಿದ್ದ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಸೆಪ್ಟೆಂಬರ್ 2021ರಲ್ಲಿ ಫಿಟ್ ಇಂಡಿಯಾ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಆನ್ಲೈನ್ ಮೂಲಕ ನಡೆದ ಮಲೇಷ್ಯಾದ ಟ್ರ್ಯಾಕ್ಸ್ ಅಂತರಾಷ್ಟ್ರೀಯ ಆನಂದೋತ್ಸವ (Carnival) ಯೋಗ ಸ್ಪರ್ಧೆಯಲ್ಲಿ ಯೋಗ ಇನ್ ಅಥ್ಲೆಟಿಕ್ಸ್ ವಿಭಾಗದಲ್ಲಿ ತೃತೀಯ ಸ್ಥಾನ. ಕರ್ನಾಟಕ ರಾಜ್ಯ ಹವ್ಯಾಸಿ ಯೋಗ ಕ್ರೀಡಾ ಚಾಂಪಿಯನ್ಶಿಪ್ ಡಿಸೆಂಬರ್, 2021ರಲ್ಲಿ ಆಯೋಜಿಸಿದ್ದ ಆನ್ಲೈನ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತ. ಶಿವಮೊಗ್ಗದ ಸ್ನೇಹಮಹಿ ವಿವೇಕಾನಂದ ಯೋಗ ಕೇಂದ್ರ ಆಯೋಜಿಸಿದ್ದ ರಾಜ್ಯ ಮಟ್ಟದ ಆನ್ಲೈನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತ. ನಿರಂತರ ಯೋಗ ಕೇಂದ್ರ ಕಾರ್ಕಳ ನಡೆಸಿದ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವಿಕೆ. ಜನವರಿ 2022 ರಲ್ಲಿ ತಮಿಳುನಾಡಿನ ಪಡುಕೊಟ್ಟಾಯಿಯ ಆತ್ಮಯೋಗ ಕೇಂದ್ರ ಆನ್ಲೈನಲ್ಲಿ ಆಯೋಜಿಸಿದ್ದ "ಹತ್ತು ನಿಮಿಷ ಹತ್ತು ಆಸನ" ಎಂಬ ಯೋಗ ಕಾರ್ಯಕ್ರಮಲ್ಲಿ ತಾನು ಕಲಿಯುತ್ತಿರುವ ನಿರಂತರ ಯೋಗ ಕೇಂದ್ರವನ್ನು ಪ್ರತಿನಿಧಿಸಿದ್ದಾಳೆ. ದಿಲ್ಲಿಯ ಯೋಗಾಲಯ ಆರೋಗ್ಯ ಜಾಗೃತಿ ಸಂಸ್ಥೆಯು ಸಂಯೋಜಿಸಿದ್ದ ರಥಸಪ್ತಮಿ ಉತ್ಸವ 2022 ಆನ್ಲೈನ್ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಹೀಗೆ ಯಾದಿ ಮುಂದುವರಿಯುತ್ತದೆ. ಹಲವಾರು ಪತ್ರಿಕೆಗಳು ಶಿವಾನಿಯ ಪ್ರತಿಭೆಯನ್ನು ಗುರುತಿಸಿವೆ. ಅನೇಕ ಸಂಘ ಸಂಸ್ಥೆಗಳು ಅವಳನ್ನು ಗೌರವಿಸಿ, ಸನ್ಮಾನಿಸಿವೆ. ಅಂಡಮಾನ್ ನಿಕೋಬರಿನ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ನೀಡಿ

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹರಸಿ ಆಶೀರ್ವದಿಸಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಂಗಳೂರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದ್ದಾರೆ. ಬೆಳ್ಳಂಪಳ್ಳಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿಯವರು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿದ್ದಾರೆ. ವಲಯ ಶಿಕ್ಷಣಾಧಿಕಾರಿ ಶ್ರೀ ವೆಂಕಟೇಶ್ ನಾಯಕ್ ಅವರು ಕಾರ್ಕಳದ ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ಸನ್ಮಾನಿಸಿದ್ದಾರೆ. ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯು ಗೌರವಿಸಿದೆ. ಲಯನ್ಸ್ ಲಿಯೋ ಕ್ಲಬ್, ಇಂದ್ರಾಳಿ ಸನ್ಮಾನಿಸಿದೆ. ಶಿವಾನಿ ವ್ಯಾಸಂಗ ಮಾಡುತ್ತಿರುವ ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆ ಗೌರವಿಸಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಅವರ ಮನೆಯಂಗಳದಲ್ಲಿ ಗೌರವಿಸಿದ್ದಾರೆ. ಡಾ. ಮೋಹನ್ ದಾಸ್ ಪ್ರಭು, ಸಾಣೂರ್ ಅವರು ಮನಗೆ ಬಂದು ಗೌರವಿಸಿದ್ದಾರೆ.
ಟಿ. ಸುಬ್ರಹ್ಮಣ್ಯ ಉಡುಪ ಮತ್ತು ವಸಂತಿ ಎಸ್. ಉಡುಪ
ಶಂಕರನಾರಾಯಣ ಅವರ ಮನೆಯಂಗಳದಲ್ಲಿ ಅಭಿನಂದಿಸಿ ಗೌರವಿಸಿದ್ದಾರೆ.
ಸ್ಪಂದನ ವಾಹಿನಿಯಲ್ಲಿ ‘ಅರಳುವ ಮೊಗ್ಗು’ ಕಾರ್ಯಕ್ರಮ ಸದ್ಯದಲ್ಲಿ ಬಿತ್ತರಗೊಳ್ಳಲಿದೆ. ಶಿವಾನಿಯ ಪ್ರತಿಭೆ ಕೇವಲ ಯೋಗಾಸನಗಳಿಗೆ ಸ್ತಿಮಿತಗೊಂಡದಲ್ಲ. ಔರಂಗಾಬಾದಿನ ಮದರ್ ತೆರೆಸಾ ಮಕ್ಕಳಾ ವಿಕಾಸ ಸಂಘದವರು 2019ರಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ಕೃಷ್ಟ ಸ್ಥಾನವನ್ನು ಪಡೆದಿದ್ದಾಳೆ. ವಿದ್ಯೋದಯ ಪಬ್ಲಿಕ್ ಶಾಲೆಯ ನಾಲ್ಕನೆ ತರಗತಿಯಲ್ಲಿ ಓದುತ್ತಿರುವ ಶಿವಾನಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂದಿದ್ದು ಬಹುಮಾನಗಳನ್ನು ಗಳಿಸಿದ್ದಾಳೆ. ಕೃಷ್ಣಾಷ್ಟಮಿಯಲ್ಲಿ ಮುದ್ದು ಕೃಷ್ಣನ ವೇಷ ಮಾಡಿ ಶ್ರೀಗಳಿಂದ ಪುರಸ್ಕೃತಳಾಗಿದ್ದಾಳೆ. ಶಿವಾನಿ ಭರತನಾಟ್ಯವನ್ನು ಗುರು ಸುಧೀರ್ ರಾವ್ ಕೊಡವೂರು ಅವರಿಂದ ಹಾಗೂ ಚಿತ್ರಕಲೆಯನ್ನು ಕುಂಜಿಬೆಟ್ಟಿನ ಲಿಯಕತ್ ಅಲಿ ಅವರ ಆರ್ಟ್ ಗ್ಯಾಲರಿಯಲ್ಲಿ ಕಲಿಯುತ್ತಿದ್ದಾಳೆ. ಹಲವಾರು ವರ್ಷಗಳಿಂದ ಕಾರ್ಕಳದಲ್ಲಿ ನಿರಂತರ ಯೋಗ ಕೇಂದ್ರ ಎಂಬ ಯೋಗ ತರಬೇತಿ ಸಂಸ್ಥೆ ನಡೆಸುತ್ತಿರುವ ಯೋಗಗುರು ನರೇಂದ್ರ ಕಾಮತ್ ಅವರು ಶಿಷ್ಯೆ ಶಿವಾನಿಯ ತೀವ್ರ ತೆರನಾದ ಆಸಕ್ತಿ ಮತ್ತು ಅಭ್ಯಾಸ ಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ಸ್ಥಿತಿಸ್ಥಾಪಕತ್ವ ಗುಣಹೊಂದಿರುವ ರಬ್ಬರ್ ಚೆಂಡಿನಂತೆ ಪುಟಿಯುತ್ತ, ದೇಹದಲ್ಲಿ ಎಲುಬುಗಳು ಇಲ್ಲ ಎಂಬಂತೆ ಯೋಗಾಸನಗಳನ್ನು ಮಾಡುವ ಶಿವಾನಿಯ ಸಾಧನೆಗಳು ನಿರಂತರತೆ ಪಡೆಯಲಿ. ರಾಷ್ಟ್ರೀಯ, ಅಂತರಾಷ್ಟ್ರೀಯ ದಾಖಲೆಗಳನ್ನು ಬರೆಯಲಿ. ಯೋಗ ವಿಜ್ಞಾನಿಯಾಗ ಬೇಕೆಂದು ಬಯಸುವ ಅವಳ ಭವಿತವ್ಯದ ಬದುಕು ಉಜ್ವಲವಾಗಲಿ. ಅವಳ ಎಲ್ಲ ಕನಸುಗಳು ನನಸಾಗಲಿ ಎಂಬ ಹಾರೈಕೆ, ಆಶಯ ನಮ್ಮದು.

ಲೇಖನ : ಉದಯ ಶೆಟ್ಟಿ, ಪಂಜಿಮಾರು.

    ಯೋಗ ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ. ವೇದ ಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಪತಂಜಲಿ ಮುನಿಗಳ 'ಯೋಗಸೂತ್ರ' ಕೃತಿಯು ಯೋಗಾಸನಗಳ ಕುರಿತ ಅಧಿಕೃತ ದಾಖಲೆ. ಇಂದು ಭಾರತವು ಯೋಗಾಸನದ ಕ್ಷೇತ್ರದಲ್ಲಿ ವಿಶ್ವಕ್ಕೆ ಗುರುಸ್ಥಾನದಲ್ಲಿದೆ. ಬಾಬಾ ರಾಮದೇವ್ ಅವರು ಯೋಗಾಸನಗಳ ಮಹತ್ವವನ್ನು ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ಪ್ರಸ್ತುತ ಪಡಿಸುತ್ತ ಬರುತ್ತಿದ್ದಾರೆ. ಸನ್ಮಾನ್ಯ ನರೇಂದ್ರ ಮೋದಿಜಿಯವರು ಪ್ರಧಾನಿಯಾದ ಮೇಲಂತೂ ಯೋಗಕ್ಕೆ ವಿಶ್ವಮಾನ್ಯತೆ ದೊರಕಿದೆ. 2015ರಿಂದ ಪ್ರತಿ ವರ್ಷ ಜೂನ್, 21ನ್ನು  ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕುರಿತು 2014ರಲ್ಲಿ ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

    ಅತ್ಯಂತ ಕಠಿಣ ಮತ್ತು ಕಲಾತ್ಮಕ ಯೋಗಾಸನಗಳ ಕ್ಷೇತ್ರದಲ್ಲಿ ಶಿವಾನಿ ಶಿವಾನಂದ್ ಶೆಟ್ಟಿ ಎಂಬ ಒಂಬತ್ತು ವರ್ಷದ ಪುಟ್ಟ ಬಾಲಕಿಯ ಸಾಧನೆ ಅಪೂರ್ವ ಹಾಗೂ ಅದ್ಭುತ. ಒಂದು ಮಾತಿದೆ. "ಮಾತು ಸಾಧನೆಯಾಗಬಾರದು. ಸಾಧನೆಯೇ ಮಾತನಾಡಬೇಕು" ಶಿವಾನಿಯ ಸಾಧನೆ ಮಾತನಾಡುತ್ತಿದೆ.  ಈ ಮಾತು ಅತ್ತಲು, ಇತ್ತಲು, ಸುತ್ತಲು ಪಸರುತ್ತ, ಅನುರಣನಿಸುತ್ತ ಊರಿನ, ನಾಡಿನ ಮಾತಾಗುತ್ತಿದೆ. ಕೇವಲ ಒಂಬತ್ತರ ಹರೆಯದ ಶಿವಾನಿಯ ಸಾಧನೆಗಳ ದಾಖಲೆಗಳು ಸರಮಾಲೆಯಾಗುತ್ತಿರುವುದು ರೋಚನೀಯ ಮತ್ತು ಶ್ಲಾಘನೀಯ.
       ಶ್ರೀಮತಿ ಸುಜಾತ ಶೆಟ್ಟಿ, ಹೆಬ್ರಿ ಹಾಗೂ ಶ್ರೀ ಶಿವಾನಂದ್ ಶೆಟ್ಟಿ, ಬೇಳಂಜೆ ದಂಪತಿಗಳ ಪ್ರೀತಿಗೆ ಅಂಕುರಿಸಿದ ಏಕಮಾತ್ರ ತನುಜಾತೆ ಶಿವಾನಿ. ಅವಧಿ ಪೂರ್ವ ಪ್ರಸವದಿಂದ ಜನಿಸಿ ಬಸವಳಿದವಳು. ಹಸುಗೂಸು ತಾಯಿಂದ ದೂರವಾಗಿ ತಬ್ಬಲಿಯಂತೆ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ಕಳೆದ ಒಂದು ವರ್ಷಕ್ಕಿಂತಲೂ ಅಲ್ಪ ಅವಧಿಯಲ್ಲಿ ಶಿವಾನಿ ಕಲಾತ್ಮಕ ಯೋಗಾಸನಗಳ ಮೂಲಕ ಏರಿದ ಎತ್ತರ, ಪರಿಕ್ರಮಿಸಿದ ಆಳ ಅಗಲ, ಊರಿದ ಮೈಲುಗಲ್ಲುಗಳು ಕೇಳುಗರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ಯೋಗ ವಿದ್ಯೆಯನ್ನು ಲೀಲಾಜಾಲವಾಗಿ ಕರವಶಮಾಡಿಕೊಳ್ಳುತ್ತಿರುವ ಮೂಲಕ ಶಿವಾನಿ ಒಸರುತ್ತ, ಪಸರುತ್ತ, ಪರಿಮಳಿಸುತ್ತ, ನಾಲ್ದೆಸೆಯಲ್ಲಿ ಖ್ಯಾತಳಾಗುತ್ತಿದ್ದಾಳೆ. ಜನನಿ ಜನಕರು ಮನದಲ್ಲಿ ಆನಂದ ತುಂದಿಲರಾಗಿದ್ದಾರೆ. ಮೊದಲು ತಂದೆಯವರು ಮಾಡುವ ಕೆಲವೊಂದು ಯೋಗಾಸನಗಳನ್ನು ನೋಡಿಯೇ ಕಲಿತವಳು ಶಿವಾನಿ. ಪ್ರಸ್ತುತ ನಿಪುಣ, ಪರಿಣಿತ, ಹಾಗೂ ಹೆಸರಾಂತ ಯೋಗಗುರು ಕಾರ್ಕಳ ಶ್ರೀ ನರೇಂದ್ರ ಕಾಮತ್ ಅವರ ನೆಚ್ಚಿನ ಶಿಷ್ಯೆ.  ಪುಟ್ಟ ಬಾಲಕಿ ಹೆತ್ತವರ ಹಾಗೂ ಗುರುಗಳ ನಿರೀಕ್ಷೆಯನ್ನು ಮೀರಿ, ಏರಿ ಬೆಳೆಯುತ್ತಿದ್ದಾಳೆ. ಗುರು ಕಲಿಸುವ ಪ್ರತಿಯೊಂದು ಆಸನಗಳನ್ನು ಅಂಜಲಿಬದ್ಧಳಾಗಿ ವೀಕ್ಷಿಸಿ, 'ಅಂಗೈಯಲ್ಲಿ ನೆಲ್ಲಿಕಾಯಿ' ಎಂಬ ನಾಣ್ಣುಡಿಯಂತೆ ಕಲಿಯುತ್ತಿದ್ದಾಳೆ. ಅತ್ಯಂತ ಕಠಿಣ ಮತ್ತು ಕಲಾತ್ಮಕ ಯೋಗಾಸನಗಳನ್ನು ಗುರುಗಳು ಕಲಿಸಿದಾಕ್ಷಣ ಕಲಿಯುವ ಮಟ್ಟಕ್ಕೆ ದೈಹಿಕವಾಗಿ, ಮಾನಸಿಕವಾಗಿ ತನ್ನನ್ನು ತಾನು ಸಂಪೂರ್ಣವಾಗಿ ಒಗ್ಗಿಸಿಕೊಳ್ಳುವ ಕಲೆ ಅವಳಿಗೆ ಸಿದ್ಧಿಸಿದೆ ಎಂದರೆ ಉತ್ಪ್ರೇಕ್ಷೆ ಆಗಲಾರದು. ನಿಖರವಾದ ಮಾನಸಿಕ ಏಕಾಗ್ರತೆ ಮತ್ತು ದೈಹಿಕ ಶ್ರಮ ಬೇಡುವ ಕಠಿಣ ತರದ ಎಲ್ಲ ಯೋಗಾಸನಗಳನ್ನು ಅತ್ಯಂತ ಸುಲಲಿತವಾಗಿ ಕರಗತ ಮಾಡಿಕೊಳ್ಳುತ್ತಾಳೆ. ಮುಖ್ಯವಾಗಿ ಪಿಂಚ ವೃಶ್ಚಿಕಾಸನ, ಮುಕ್ತ ವೃಶ್ಚಿಕಾಸನ, ಪಿಂಚ ಮಯೂರಾಸನ,

    ಶಿವಾನಿಯು ಅಲ್ಪ ಅವಧಿಯಲ್ಲಿ ಸಾಧಿಸಿರುವ ಸಾಧನೆಗಳನ್ನು ಪುಟ್ಟ ಲೇಖನದಲ್ಲಿ ದಾಖಲಿಸುವುದು ಕಷ್ಟ ಸಾಧ್ಯ. ಜನವರಿ, 2022ರಲ್ಲಿ ನಡೆದ ಆನ್ಲೈನ್ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ ಹಾಗೂ ಅಂತರಾಷ್ಟ್ರೀಯ ಕಾರ್ಯಗಾರದಲ್ಲಿ ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಅಂಡಮಾನ್ ನಿಕೋಬರ್ ದ್ವೀಪ ಸಮೂಹದ ರಾಜಧಾನಿ ಫೋರ್ಟ್ ಬ್ಲೇರ್ ಇಲ್ಲಿ ನಡೆದ 2021-22 ಸಾಲಿನ ಆರನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಶಿವಮೊಗ್ಗದ ವರ್ಷಿಣಿ ಯೋಗ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ಏರ್ಪಡಿಸಿದ್ದ ಯೋಗಾಸನ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಸೆಪ್ಟೆಂಬರ್ 2021ರಲ್ಲಿ ಫಿಟ್ ಇಂಡಿಯಾ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಆನ್ಲೈನ್ ಮೂಲಕ ನಡೆದ ಮಲೇಷ್ಯಾದ ಟ್ರ್ಯಾಕ್ಸ್ ಅಂತರಾಷ್ಟ್ರೀಯ ಆನಂದೋತ್ಸವ (Carnival) ಯೋಗ ಸ್ಪರ್ಧೆಯಲ್ಲಿ ಯೋಗ ಇನ್ ಅಥ್ಲೆಟಿಕ್ಸ್ ವಿಭಾಗದಲ್ಲಿ ತೃತೀಯ ಸ್ಥಾನ. ಕರ್ನಾಟಕ ರಾಜ್ಯ ಹವ್ಯಾಸಿ ಯೋಗ ಕ್ರೀಡಾ ಚಾಂಪಿಯನ್ಶಿಪ್ ಡಿಸೆಂಬರ್, 2021ರಲ್ಲಿ ಆಯೋಜಿಸಿದ್ದ ಆನ್ಲೈನ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತ. ಶಿವಮೊಗ್ಗದ ಸ್ನೇಹಮಹಿ ವಿವೇಕಾನಂದ ಯೋಗ ಕೇಂದ್ರ ಆಯೋಜಿಸಿದ್ದ ರಾಜ್ಯ ಮಟ್ಟದ ಆನ್ಲೈನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತ. ನಿರಂತರ ಯೋಗ ಕೇಂದ್ರ ಕಾರ್ಕಳ ನಡೆಸಿದ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವಿಕೆ. ಜನವರಿ 2022 ರಲ್ಲಿ ತಮಿಳುನಾಡಿನ ಪಡುಕೊಟ್ಟಾಯಿಯ ಆತ್ಮಯೋಗ ಕೇಂದ್ರ ಆನ್ಲೈನಲ್ಲಿ ಆಯೋಜಿಸಿದ್ದ "ಹತ್ತು ನಿಮಿಷ ಹತ್ತು ಆಸನ" ಎಂಬ ಯೋಗ ಕಾರ್ಯಕ್ರಮಲ್ಲಿ ತಾನು ಕಲಿಯುತ್ತಿರುವ ನಿರಂತರ ಯೋಗ ಕೇಂದ್ರವನ್ನು ಪ್ರತಿನಿಧಿಸಿದ್ದಾಳೆ. ದಿಲ್ಲಿಯ ಯೋಗಾಲಯ ಆರೋಗ್ಯ ಜಾಗೃತಿ ಸಂಸ್ಥೆಯು ಸಂಯೋಜಿಸಿದ್ದ ರಥಸಪ್ತಮಿ ಉತ್ಸವ 2022 ಆನ್ಲೈನ್ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಹೀಗೆ ಯಾದಿ ಮುಂದುವರಿಯುತ್ತದೆ.

      ಹಲವಾರು ಪತ್ರಿಕೆಗಳು ಶಿವಾನಿಯ ಪ್ರತಿಭೆಯನ್ನು ಗುರುತಿಸಿವೆ. ಅನೇಕ ಸಂಘ ಸಂಸ್ಥೆಗಳು ಅವಳನ್ನು ಗೌರವಿಸಿ, ಸನ್ಮಾನಿಸಿವೆ. ಅಂಡಮಾನ್ ನಿಕೋಬರಿನ ಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ನೀಡಿ ಕಾಣಿಯೂರು ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹರಸಿ ಆಶೀರ್ವದಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಂಗಳೂರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದ್ದಾರೆ. ಬೆಳ್ಳಂಪಳ್ಳಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿಯವರು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿದ್ದಾರೆ. ವಲಯ ಶಿಕ್ಷಣಾಧಿಕಾರಿ ಶ್ರೀ ವೆಂಕಟೇಶ್ ನಾಯಕ್ ಅವರು ಕಾರ್ಕಳದ ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ಸನ್ಮಾನಿಸಿದ್ದಾರೆ. ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯು ಗೌರವಿಸಿದೆ. ಲಯನ್ಸ್ ಲಿಯೋ ಕ್ಲಬ್, ಇಂದ್ರಾಳಿ ಸನ್ಮಾನಿಸಿದೆ. ಶಿವಾನಿ ವ್ಯಾಸಂಗ ಮಾಡುತ್ತಿರುವ ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆ ಗೌರವಿಸಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ  ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಅವರ ಮನೆಯಂಗಳದಲ್ಲಿ ಗೌರವಿಸಿದ್ದಾರೆ. ಡಾ. ಮೋಹನ್ ದಾಸ್ ಪ್ರಭು, ಸಾಣೂರ್ ಅವರು ಮನಗೆ ಬಂದು ಗೌರವಿಸಿದ್ದಾರೆ. 

       ಶಿವಾನಿಯ ಪ್ರತಿಭೆ ಕೇವಲ ಯೋಗಾಸನಗಳಿಗೆ ಸ್ತಿಮಿತಗೊಂಡದಲ್ಲ. ಔರಂಗಾಬಾದಿನ ಮದರ್ ತೆರೆಸಾ ಮಕ್ಕಳಾ ವಿಕಾಸ ಸಂಘದವರು 2019ರಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ಕೃಷ್ಟ ಸ್ಥಾನವನ್ನು ಪಡೆದಿದ್ದಾಳೆ. ವಿದ್ಯೋದಯ ಪಬ್ಲಿಕ್ ಶಾಲೆಯ ನಾಲ್ಕನೆ ತರಗತಿಯಲ್ಲಿ ಓದುತ್ತಿರುವ ಶಿವಾನಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸದಾ ಮುಂದಿದ್ದು ಬಹುಮಾನಗಳನ್ನು ಗಳಿಸಿದ್ದಾಳೆ. ಕೃಷ್ಣಾಷ್ಟಮಿಯಲ್ಲಿ ಮುದ್ದು ಕೃಷ್ಣನ ವೇಷ ಮಾಡಿ ಶ್ರೀಗಳಿಂದ ಪುರಸ್ಕೃತಳಾಗಿದ್ದಾಳೆ. ಶಿವಾನಿ ಭರತನಾಟ್ಯವನ್ನು ಗುರು ಸುಧೀರ್ ರಾವ್ ಕೊಡವೂರು ಅವರಿಂದ ಹಾಗೂ ಚಿತ್ರಕಲೆಯನ್ನು ಕುಂಜಿಬೆಟ್ಟಿನ ಲಿಯಕತ್ ಅಲಿ ಅವರ ಆರ್ಟ್ ಗ್ಯಾಲರಿಯಲ್ಲಿ ಕಲಿಯುತ್ತಿದ್ದಾಳೆ. ಹಲವಾರು ವರ್ಷಗಳಿಂದ ಕಾರ್ಕಳದಲ್ಲಿ ನಿರಂತರ ಯೋಗ ಕೇಂದ್ರ ಎಂಬ ಯೋಗ ತರಬೇತಿ ಸಂಸ್ಥೆ ನಡೆಸುತ್ತಿರುವ ಯೋಗಗುರು ನರೇಂದ್ರ ಕಾಮತ್ ಅವರು ಶಿಷ್ಯೆ ಶಿವಾನಿಯ ತೀವ್ರ ತೆರನಾದ ಆಸಕ್ತಿ ಮತ್ತು ಅಭ್ಯಾಸ ಕ್ರಮದ ಬಗ್ಗೆ ಸಂತಸ  ವ್ಯಕ್ತಪಡಿಸುತ್ತಾರೆ. 
     ಸ್ಥಿತಿಸ್ಥಾಪಕತ್ವ ಗುಣಹೊಂದಿರುವ ರಬ್ಬರ್ ಚೆಂಡಿನಂತೆ ಪುಟಿಯುತ್ತ, ದೇಹದಲ್ಲಿ ಎಲುಬುಗಳು ಇಲ್ಲ ಎಂಬಂತೆ ಯೋಗಾಸನಗಳನ್ನು ಮಾಡುವ ಶಿವಾನಿಯ ಸಾಧನೆಗಳು ನಿರಂತರತೆ ಪಡೆಯಲಿ. ರಾಷ್ಟ್ರೀಯ, ಅಂತರಾಷ್ಟ್ರೀಯ ದಾಖಲೆಗಳನ್ನು ಬರೆಯಲಿ. ಯೋಗ ವಿಜ್ಞಾನಿಯಾಗ ಬೇಕೆಂದು ಬಯಸುವ ಅವಳ ಭವಿತವ್ಯದ ಬದುಕು ಉಜ್ವಲವಾಗಲಿ. ಅವಳ ಎಲ್ಲ ಕನಸುಗಳು ನನಸಾಗಲಿ ಎಂಬ ಹಾರೈಕೆ, ಆಶಯ ನಮ್ಮದು.
 

1 Comment
  1. ಪ್ರಕಾಶ್ ಶೆಟ್ಟಿ ತುಲುವೆ.. says

    ಇಂಚಿನ ಪ್ರತಿಭೆಲೆಗ್ ಸಪೊರ್ಟ್ ಮಲ್ಪುನ ನಮ್ಮ ಕರ್ತವ್ಯ…. ಮಾತೆರ್ಲಾ ಉಂದು ಬರವುನ್ ಆಯಿನಾತ್… ನಿಕ್ಲೆ…fb….ಇನ್ಸ್ಟಾಗ್ರಾಮ್…ವಾಟ್ಸಪ್… ಸ್ಟೇಟಸ್… ಪಾಡ್ಲೆ..ಸೊಲ್ಮೆಲು…???

Leave A Reply

Your email address will not be published.