52 ನೇ ವಯಸ್ಸಿನಲ್ಲಿ ಮರು ಪ್ರೀತಿ ಕಂಡುಕೊಂಡ ತಾಯಿಗೆ ಮದುವೆ ಮಾಡಿಸಿದ ಮಗ!

ಹೆಣ್ಣು ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಾಳೆ. ತನ್ನ ಸಂಸಾರಕ್ಕಾಗಿ ಆಕೆ ಸರ್ವ ತ್ಯಾಗವನ್ನು ಕೂಡಾ ಮಾಡುವ ಆಕೆಯ ಒಂಟಿತನವನ್ನು ಕೂಡ ಹೋಗಲಾಡಿಸುವ ಜವಾಬ್ದಾರಿ ಕೂಡಾ ಪ್ರತೀ ಮಕ್ಕಳ ಕರ್ತವ್ಯ. ಇದೊಂದು ಅಂಥದ್ದೇ ಕಥೆ. 44 ನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಸ್ತನ ಕ್ಯಾನ್ಸರ್ ಗೆ ತುತ್ತಾದ ಅಮ್ಮನಿಗೆ ಮಗನೊಬ್ಬ 52 ನೇ ವಯಸ್ಸಿಗೆ ಮರುಮದುವೆ ಮಾಡಿಸಿದ್ದಾನೆ. ಈ ಸ್ಟೋರಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

ಜಿಮೀತ್ ಗಾಂಧಿ ಎನ್ನುವವರು ತಾಯಿಯ ಜೀವನದ ಪ್ರೇಮ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಿಮೀತ್ ತಾಯಿ 44 ನೇ ವಯಸ್ಸಿನಲ್ಲಿ ತನ್ನ ಗಂಡನನ್ನು ಕಳೆದುಕೊಳ್ಳುತ್ತಾರೆ. 2019 ರಲ್ಲಿ 3 ನೇ ಹಂತದ ಸ್ತನದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಅನಂತರ ಸತತವಾಗಿ 2 ವರ್ಷಗಳ ಚಿಕಿತ್ಸೆಯ ಬಳಿಕ ಒಂದು ಹಂತಕ್ಕೆ ಗುಣಮುಖರಾಗಿದ್ದರು‌. ಕಳೆದ ವರ್ಷ ಡೆಲ್ಟಾ ವೇರಿಯಂಟ್ ಗೆ ಬೇರೆ ತುತ್ತಾಗಿದ್ದರು. ಆದರೂ ಜೀವನೋತ್ಸಾಹ ಕಳೆದುಕೊಳ್ಳದ ಅವರು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.

ತಮ್ಮ‌52 ನೇ ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಹಾಗಾಗಿ ಅವರ ಇಷ್ಟದ ಹುಡುಗನ ಜೊತೆ ಮದುವೆ ಮಾಡಿಸಿದ್ದೇನೆ. ಅಮ್ಮ ಎಂದರೆ ನಿಜಕ್ಕೂ ಹೋರಾಟಗಾರ್ತಿಯೂ ಹೌದು. ಯೋಧನೂ ಹೌದು ಎಂದು ಬರೆದಿದ್ದಾರೆ.

ಜಿಮೀತ್ ಅವರು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡ ಈ ಕತೆಯಲ್ಲಿ ತಾಯಿಯ ಕಷ್ಟದ ದಿನಗಳನ್ನು ವಿವರಿಸಿದ್ದಾರೆ. ಜೊತೆಗೆ ನಿಜವಾದ ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಫೆ.14 ರಂದು ಜೀಮೀತ್ ತಾಯಿ ವಿವಾಹವಾಗಿದ್ದಾರೆ.

Leave A Reply

Your email address will not be published.