ವಾಹನ ಮಾಲೀಕರೇ ಗಮನಿಸಿ: ಇನ್ನು ಮುಂದೆ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯ!

ವಾಹನ ಮಾಲೀಕರೇ ಎಚ್ಚರ ವಹಿಸಿ. ಫಿಟ್ನೆಸ್ ಸರ್ಟಿಫಿಕೇಟ್ ( FC) ಇಲ್ಲದೆ ಇನ್ನು ಮುಂದೆ ವಾಹನವನ್ನು ರಸ್ತೆಗೆ ಇಳಿಸುವಂತಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ( MoRTH) ರಸ್ತೆಗೆ ಇಳಿಯಲಿರುವ ಎಲ್ಲಾ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ.

ಇನ್ನು ಮುಂದೆ ಫಿಟ್ನೆಸ್ ಪ್ರಮಾಣ ಪತ್ರ ಹಾಗೂ ಅದರ ನೋಂದಣಿ‌ ಚಿಹ್ನೆಯ ನಿಗದಿತ ಮಾನದಂಡದ ರೀತಿಯಲ್ಲಿ ತೋರಿಸಬೇಕಾಗುತ್ತದೆ.

ಈ ಬಗ್ಗೆ ಕರಡು ಅಧಿಸೂಚನೆಯನ್ನು ‌ಕೇಂದ್ರ ಸರಕಾರ ಗುರುವಾರ ಹೊರಡಿಸಿದ್ದು, ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರಲಿದೆ.

ಈ ಫಿಟ್ನೆಸ್ ಪ್ರಮಾಣಪತ್ರವು ನಂಬರ್ ಪ್ಲೇಟ್ ನಂತೆಯೇ ಇರಲಿದೆ. ವಾಹನದ ಫಿಟ್ನೆಸ್ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಫಿಟ್ನೆಸ್ ಪ್ರಮಾಣ ಪತ್ರವು ಡಿಡಿ-ಎಂಎಂ-ವೈವೈ ( DD-MM-YY) ರೀತಿಯಲ್ಲಿ ಇರಬೇಕು. ಈ ಮಾದರಿಯಲ್ಲಿ ಇರದಿದ್ದರೆ ದೊಡ್ಡ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ.

ಮಧ್ಯಮ ಸರಕುಗಳು/ಪ್ರಯಾಣಿಕರ ವಾಹನಗಳು, ಭಾರೀ ಸರಕುಗಳು/ ಪ್ರಯಾಣಿಕರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ಸಂದರ್ಭದಲ್ಲಿ ಪ್ರಮಾಣಪತ್ರವನ್ನು ವಿಂಡ್ ಸ್ಕ್ರೀನ್ ನ ಎಡಭಾಗದ ಮೇಲಿನ ಅಂಚಿನಲ್ಲಿ ಕಾಣಿಸುವಂತೆ ಇಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಆಟೋ ರಿಕ್ಷಾಗಳು, ಇ ರಿಕ್ಷಾಗಳು, ಇ ಕಾರ್ಟ್ ಗಳು ಮತ್ತು ಕ್ವಾಡ್ರಿಸೈಕಲ್ ಗಳ ವಿಚಾರದಲ್ಲಿ ಪ್ರಮಾಣ ಪತ್ರವನ್ನು ವಿಂಡ್ ಸ್ಕ್ರೀನ್ ನ ಎಡಭಾಗದ ಮೇಲಿನ ಅಂಚಿನಲ್ಲಿ ಕೂರುವುದಾದಲ್ಲಿ ಅಲ್ಲಿ ಇಡಬೇಕು ಎಂದು ಹೇಳಲಾಗಿದೆ.

ಮೋಟಾರು ಸೈಕಲ್‌ ಗಳಲ್ಲಿ ಆಯಾ ವಾಹನದಲ್ಲಿ ಎದ್ದು ಕಾಣುವ ಸೈಡ್ ನಲ್ಲಿ ಫಿಟ್ನೆಸ್ ಪ್ರಮಾಣಪತ್ರವನ್ನು ಕಾಣುವಂತೆ ಇಡಬೇಕು. ವಾಹನಗಳು ನೀಲಿ ಹಿನ್ನೆಲೆಯಲ್ಲಿ ಹಳದಿ ಬಣ್ಣದ ಏರಿಯಲ್ ಬೋಲ್ಡ್ ಲಿಪಿಯಲ್ಲಿ ಮಾಹಿತಿಯನ್ನು ಪ್ರದರ್ಶಿಸಬೇಕು. ಇದಲ್ಲದೆ ರಸ್ತೆ ಸಾರಿಗೆ ಸಚಿವಾಲಯವು ಮುಂದಿನ 30 ದಿನಗಳಲ್ಲಿ ಸಾರ್ವಜನಿಕರು ಮತ್ತು ಇತರ ಮಧ್ಯಸ್ಥಗಾರರಿಂದ ಸಲಹೆಯನ್ನು ಆಹ್ವಾನಿಸಲಾಗಿದೆ.

ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿ ಅನಿವಾರ್ಯ. ಫಿಟ್ನೆಸ್ ಸರ್ಟಿಫಿಕೇಟ್ ಮೋಟಾರು ವಾಹನಕ್ಕೆ 1000 ರೂಪಾಯಿ, ಮೂರು ಚಕ್ರವಾಹನದ ಫಿಟ್ನೆಸ್ ಸರ್ಟಿಫಿಕೇಟ್ 3,500 ರೂಪಾಯಿ, ಕಾರು ಸೇರಿದಂತೆ ಲಘುವಾಹನಕ್ಕೆ 7,500 ರೂಪಾಯಿ. ಮೀಡಿಯಂ ಗೂಡ್ಸ್ ಹಾಗೂ ಪ್ಯಾಸೆಂಜರ್ ವಾಹನಕ್ಕೆ 10,000 ರೂಪಾಯಿ, ಘನ ವಾಹನ ಹಾಗೂ ಘನ ಪ್ಯಾಸೆಂಜರ್ ವಾಹನಕ್ಕೆ 12,500 ರೂಪಾಯಿ ಪ್ರತಿ ವರ್ಷ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಪಾವತಿಸಬೇಕು.

15 ವರ್ಷಕ್ಕಿಂತ ಹಳೇ ವಾಹನಕ್ಕೆ ಪ್ರತಿ ವರ್ಷ ಹಸಿರು ತೆರಿಗೆ ಪಾವತಿಸಬೇಕು. ಇದು ನಗರದಿಂದ ನಗರಕ್ಕೆ, ಪಟ್ಟಣ, ಹಳ್ಳಿಗಳಲ್ಲಿ ವ್ಯತ್ಯಾಸವಾಗಲಿದೆ. ದೆಹಲಿಯಲ್ಲಿ ವಾಹನದ ರಸ್ತೆ ತೆರಿಗೆಯ ಶೇಕಡಾ 50 ರಷ್ಟು ಮೊತ್ತವನ್ನು ಗ್ರೀನ್ ಟ್ಯಾಕ್ಸ್ ಆಗಿ ಪಾವತಿಸಬೇಕು.

Leave A Reply

Your email address will not be published.