ಫಿಟ್‌ ಬಿಟ್‌ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ |ಖುದ್ದು ಕಂಪನಿಯೇ ಹೇಳಿದೆ ಈ ವಾಚ್ ನ ಅಪಾಯ!!

ಹೆಚ್ಚಿನ ಜನರು ಇಂದು ಫಿಟ್‌ ಬಿಟ್‌ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಉಪಯೋಗಿಸುತ್ತಿದ್ದಾರೆ.ಇದು ಇಂದಿನ ಟ್ರೆಂಡ್ ವಾಚ್ ಎಂದೇ ಹೇಳಬಹುದಾಗಿದೆ. ಆದ್ರೆ ಈ ಸ್ಮಾರ್ಟ್ ವಾಚ್ ಉಪಯೋಗಿಸೋರಿಗೆ ಶಾಕಿಂಗ್ ನ್ಯೂಸ್ ಇದ್ದು, ಇದರಿಂದ ಅಪಾಯ ಇರೋ ಕುರಿತು ಕಂಪನಿಯೇ ಮಾಹಿತಿ ನೀಡಿದೆ.

ಹೌದು.ಈ ವಾಚ್‌ ಗಳಲ್ಲಿ ಬ್ಯಾಟರಿ ಅತಿಯಾಗಿ ಬಿಸಿಯಾಗುತ್ತಿರುವುದರಿಂದ ಸುಟ್ಟು ಹೋಗುವ ಸಾಧ್ಯತೆ ಇದ್ದು,ಬೆಂಕಿ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಖುದ್ದು ಕಂಪನಿಯೇ ಹೇಳಿದೆ.10 ಲಕ್ಷಕ್ಕೂ ಅಧಿಕ ವಾಚ್‌ ಗಳನ್ನು ಫಿಟ್‌ ಬಿಟ್‌ ಕಂಪನಿ ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ.

ಅಮೆರಿಕದಲ್ಲೇ ಸುಮಾರು 10 ಲಕ್ಷ ಫಿಟ್‌ ಬಿಟ್‌ ವಾಚ್‌ ಗಳು ಮಾರಾಟವಾಗಿದ್ದವು. ಅದನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಕಂಪನಿ ಸುಮಾರು 6.93 ಲಕ್ಷ ವಾಚ್‌ ಗಳನ್ನು ಸೇಲ್‌ ಮಾಡಿತ್ತು. ಈ ಪೈಕಿ ವಾಚ್‌ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅಮೆರಿಕದಿಂದ 115 ದೂರುಗಳು ಬಂದಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ 59 ಗ್ರಾಹಕರು ಕಂಪ್ಲೇಂಟ್‌ ಮಾಡಿದ್ದಾರೆ.ಇವರ ಪೈಕಿ ಸುಮಾರು 118 ಜನರು ಸುಟ್ಟ ಗಾಯಗಳಿಂದ ತೊಂದರೆಗೊಳಗಾಗಿದ್ದಾರೆ.

ಹಾಗಾಗಿ ಫಿಟ್‌ ಬಿಟ್‌ ಕಂಪನಿ ಅಯಾನಿಕ್‌ ಸ್ಮಾರ್ಟ್‌ ವಾಚ್‌ ಗಳ ಪೈಕಿ ಸಮಸ್ಯೆ ಇರುವ ಕೆಲವು ನಿರ್ದಿಷ್ಟ ಬಣ್ಣ ಹಾಗೂ ಮಾದರಿಯ ವಾಚ್‌ ಗಳನ್ನು ಮಾತ್ರ ಹಿಂಪಡೆಯುತ್ತಿದ್ದು,299 ಡಾಲರ್‌ ಹಣವನ್ನು ಗ್ರಾಹಕರಿಗೆ ಮರುಪಾವತಿ ಮಾಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಫಿಟ್‌ ಬಿಟ್‌ ನ ಬೇರೆ ಮಾದರಿಯ ವಾಚ್‌ ಖರೀದಿ ಮಾಡಲು ಗ್ರಾಹಕರು ಇಚ್ಛಿಸಿದಲ್ಲಿ ಅವರಿಗೆ ಶೇ.40 ರಷ್ಟು ಡಿಸ್ಕೌಂಟ್‌ ಸಹ ಸಿಗಲಿದೆ.

Leave A Reply

Your email address will not be published.