ನಾಳೆ ಚಂದ್ರನಲ್ಲಿಯ ಶಾಂತಿ ಕದಡಲಿದೆ ಎಂದ ಖಗೋಳಶಾಸ್ತ್ರಜ್ಞ|ಕಾರಣ!?

ನವದೆಹಲಿ:ನಾಳೆ ಚಂದ್ರನ ಮೇಲ್ಮೈ ಗೆ 3 ಟನ್‌ ತೂಕದ ,ರಾಕೆಟೊಂದರ 2ನೇ ಹಂತದ ಭಾಗ ಒಂದು ಅಪ್ಪಳಿಸಲಿದ್ದು ಇದು ಚಂದ್ರನಲ್ಲಿಯ ಶಾಂತಿ ಕದಡಲು ಕಾರಣವಾಗಲಿದೆ ಎಂದು ಖಗೋಳಶಾಸ್ತ್ರಜ್ಞ ಬಿಲ್‌ ಗ್ರೇ ಅಭಿಪ್ರಾಯಪಟ್ಟಿದ್ದಾರೆ.

ಒಂದು ಅಂದಾಜಿನ ಪ್ರಕಾರ, ಚೀನಾ 10 ವರ್ಷದ ಹಿಂದೆ ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದ್ದ ನೌಕೆ ಇದಾಗಿರಬಹುದು ಎಂಬ ಅಂದಾಜಿದ್ದು,ಆದ್ದರಿಂದ ಇದು ಬೀಳುತ್ತಿದೆ ಎನ್ನಲಾಗಿದೆ.ಆದರೆ ಖಚಿತ ಕಾರಣ ಯಾರಿಗೂ ಗೊತ್ತಿಲ್ಲ. ಇದು ಅಪ್ಪಳಿಸಿದ ನಂತರ ಇಸ್ರೋದ ಚಂದ್ರಯಾನ-2 ಹಾಗೂ ನಾಸಾದ ಎಲ್‌ಆರ್‌ಒ ನೌಕೆಗಳು ಗುರುತಿಸಲಿದ್ದು,ಆಗ ಪರಿಸ್ಥಿತಿಯ ನಿಜವಾದ ಚಿತ್ರಣ ಸಿಗಲಿದೆ.

ಬಿಲ್‌ ಗ್ರೇ ಅವರು ಪ್ರಾಜೆಕ್ಟ್ ಪ್ಲುಟೊ ಸಾಫ್ಟ್ವೇರ್‌
ಬಳಸಿ ಈ ರಾಕೆಟ್‌ನ ಚಲನೆಯನ್ನು ಪತ್ತೆಹಚ್ಚಿದ್ದಾರೆ. ಅದು ಗಂಟೆಗೆ 9,300 ಕಿ.ಮೀ. ವೇಗದಲ್ಲಿ ಸಂಚರಿಸುತ್ತ, ಚಂದ್ರನ ಕತ್ತಲಭಾಗದ ಮೇಲೆ ಉರುಳಿಕೊಳ್ಳಲಿದೆ. ಚಂದ್ರನ ಈ ಭಾಗ ಸೂರ್ಯನಿಂದ ಬಹಳ ದೂರದಲ್ಲಿರುವುದರಿಂದ, ಅಲ್ಲಿನ ಬೆಳಕೇ ಇರುವುದಿಲ್ಲ. ಆದ್ದರಿಂದ ಟೆಲಿಸ್ಕೋಪ್‌ನಲ್ಲಿ ಈ ಘಟನೆಯನ್ನು ವೀಕ್ಷಿಸಲು ಸಾಧ್ಯವಿಲ್ಲ.

Leave A Reply

Your email address will not be published.