ರೇಡಿಯೋ ವಾಹಿನಿಗಳಲ್ಲಿ ಅಶ್ಲೀಲ,ಆಕ್ಷೇಪಾರ್ಹ ಭಾಷಾ ಬಳಕೆ ಹಾಗೂ ಪ್ರಸಾರ ಮಾಡಿದರೆ ಕಠಿಣ ಕ್ರಮ
ರೇಡಿಯೋ ವಾಹಿನಿಗಳಲ್ಲಿ ಅಶ್ಲೀಲ,ಆಕ್ಷೇಪಾರ್ಹ ಭಾಷಾ ಬಳಕೆ ಹಾಗೂ ಪ್ರಸಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಾರ್ತಾ ಸಚಿವಾಲಯವು ದೇಶದ ಎಫ್ಎಂ ರೇಡಿಯೊ ವಾಹಿನಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.
ಕೆಲವು ಎಫ್ಎಂ ವಾಹಿನಿಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ವಿಷಯಗಳು ಪ್ರಸಾರವಾಗುತ್ತಿವೆ. ಕೆಲವು ಜಾಕಿಗಳ ಭಾಷೆ ಅಶಿಸ್ತಿನಿಂದ, ದ್ವಂದ್ವಾರ್ಥದಿಂದ ಕೂಡಿರುತ್ತದೆ, ನಿಂದಿಸುವಂತಿರುತ್ತದೆ.
ಈ ವಾಹಿನಿಗಳು ಅಶ್ಲೀಲ, ಆಕ್ಷೇಪಾರ್ಹ ಭಾಷಾ ಬಳಕೆ, ವಿಷಯಗಳ ಪ್ರಸಾರ ಮಾಡಬಾರದು. ಒಂದು ವೇಳೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.
ಇದು ವಾಹಿನಿಗಳಿಗೆ ನೀಡಿದ ಅನುಮತಿಯಲ್ಲಿನ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಜಿಒಪಿಎಯ (ಒಪ್ಪಂದ ನಿಯಮ) 7.6 ವಿಧಿಯ ಪ್ರಕಾರ, ಎಫ್ಎಂ ವಾಹಿನಿಯಲ್ಲಿ ಪ್ರಸಾರವಾಗುವ ಯಾವುದೇ ವಸ್ತು, ವಿಷಯ, ಸಂದೇಶ, ಜಾಹೀರಾತುಗಳು ಆಕ್ಷೇಪಾರ್ಹ, ಅಶ್ಲೀಲ, ಅನಧಿಕೃತವಾಗಿರಬಾರದು. ಹಾಗೆ ಭಾರತದ ಕಾನೂನಿನ ಚೌಕಟ್ಟನ್ನೂ ದಾಟಿರಬಾರದು ಎಂದು ತಿಳಿಸಿದೆ.