ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಹೊಸ ಸುದ್ದಿ ನೀಡಿದ ಚಂದನ್ – ನಿವೇದಿತಾ ಜೋಡಿ

ಇಂದು ಈ ಜೋಡಿಗೆ ತುಂಬಾ ವಿಶೇಷವಾದ ದಿನ, ಇಂದಿಗೆ ಚಂದನ್ ನಿವೇದಿತಾ ಮದುವೆಯಾಗಿ ಎರಡು ವರ್ಷ ತುಂಬಿದೆ. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿ ಎರಡು ವರ್ಷಗಳಿಂದ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. 

 

ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರು ಈ ಗುಡ್ ನ್ಯೂಸ್ ಅನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಇನ್ನೂ ಎರಡು ವರ್ಷದದಿಂದ ದಾಂಪತ್ಯ ಜೀವನ ಮಾಡುತ್ತಿರುವ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದೇನಪ್ಪ ಅಂದರೆ ಚಂದನ್ ಶೆಟ್ಟಿ ಅವರ ಹೊಸ ಸಿನಿಮಾದಲ್ಲಿ ನಿವೇದಿತಾ ಗೌಡ ಅವರು ನಾಯಕಿಯಾಗಿ ನಟಿಸುತ್ತಿದ್ದು ಈ ಚಿತ್ರದ ಹೆಸರು ನಿವಿ ಐ ಲವ್ ಯು ಎಂದು ಇಡಲಾಗಿದೆ. ಸದ್ಯ ವಿದೇಶಕ್ಕೆ ಹೋಗಿರುವ ಈ ಜೋಡಿ ಅಲ್ಲಿಂದ ಬಂದ ಮೇಲೆ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಹೊಸ ಸಿನಿಮಾದಲ್ಲಿ ಚಂದನ  ನಿವೇದಿತಾ ಜೊಡಿ ಹೇಗೆ ಕಾಣಲಿದೆ ? ನಿವೇದಿತಾ ಗೌಡ ಹೀರೋಯಿನ್ ಆಗಿ ಹೇಗೆ ಕಾಣುತ್ತಾರೆ, ಹೇಗೆ ನಟನೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.

ಇವರಿಬ್ಬರ ಅಭಿಮಾನಿಗಳು ಮತ್ತು ಹೈತೈಷಿಗಳು, ಸ್ನೇಹಿತರು, ಎಲ್ಲರೂ ಮದುವೆ ವಾರ್ಷಿಕೋತ್ಸವಕ್ಕೆ ವಿಶ್ ಮಾಡುತ್ತಿದ್ದಾರೆ. 

Leave A Reply

Your email address will not be published.