ಇನ್ನು ವಿಳಾಸದ ಪುರಾವೆಯಿಲ್ಲದೆ ಲೈಂಗಿಕ ಕಾರ್ಯಕರ್ತರಿಗೂ ಸಿಗುತ್ತದೆ ಆಧಾರ್ ಕಾರ್ಡ್

Share the Article

ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಆಧಾರ್ ಕಾರ್ಡ್‌ ಕಡ್ಡಾಯವಾಗಿದೆ. ಸರ್ಕಾರದ ಅನೇಕ ಸೇವೆಗಳ ಜೊತೆಗೆ ಖಾಸಗಿ ಸೇವೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಪಡೆಯುವುದು ಅನಿವಾರ್ಯ.

ಈಗ ಸೆಕ್ಸ್ ವರ್ಕರ್ಸ್  ಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ  ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಕಾರ್ಡ್‌ಗಳನ್ನು ನೀಡುವುದಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಲೈಂಗಿಕ ಕಾರ್ಯಕರ್ತರು ಇನ್ಮುಂದೆ ಸುಲಭವಾಗಿ ಆಧಾರ್ ಕಾರ್ಡ್ ಪಡೆಯಬಹುದು. ಆಧಾರ್ ಕಾರ್ಡ್ ನೀಡುವುದಕ್ಕಾಗಿ ಬೇರೆ ಯಾವುದೇ ವಿಳಾಸ ಪ್ರಮಾಣಪತ್ರ ನೀಡಬೇಕಾಗಿಲ್ಲ. ವರ್ಕರ್ಸ್ ವಿಷಯದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನಿಯಮಗಳನ್ನು ಸಡಿಲಗೊಳಿಸಿದೆ.

Leave A Reply

Your email address will not be published.