ಶಿವಪೂಜೆ ಮಾಡಲು ಬಂದ ಹಿಂದೂ ಕಾರ್ಯಕರ್ತರಿಗೆ ತಡೆ | ಸ್ಥಳದಲ್ಲಿ ಬಿಗುವಿನ ವಾತಾವರಣ!

ಶಿವಲಿಂಗ ಪೂಜೆ ಮಾಡುವ ವಿಚಾರದಲ್ಲಿ ಆಳಂದ ಪಟ್ಟಣದಲ್ಲಿ ಎರಡು ಕೋಮುಗಳ‌ ನಡುವೆ ವಿವಾದ ಉಂಟಾಗಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಆಳಂದದ ಲಾಡ್ಲೆ ಮಶಾಕ್ ದರ್ಗಾ ಪರಿಸರದಲ ಈಶ್ವರಲಿಂಗ ಇದೆ. ಇತ್ತೀಚೆಗೆ ಈ ಲಿಂಗಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದರು. ಹೀಗಾಗಿ ಶಿವರಾತ್ರಿ‌‌ ಪ್ರಯುಕ್ತ ಈಶ್ವರಲಿಂಗ ಶುದ್ಧೀಕರಣ ಅಭಿಯಾನವನ್ನು ಶ್ರೀರಾಮ ಸೇನೆ ಹಮ್ಮಿಕೊಂಡಿದೆ. ಇದಕ್ಕೆ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳಿಂದ ಬೆಂಬಲ‌ ವ್ಯಕ್ತವಾಗಿದೆ.

ಆಳಂದದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೂ ಶಿವಲಿಂಗ ಪೂಜೆಗಾಗಿ ಆಳಂದಕ್ಕೆ ಹಿಂದುಪರ ಕಾರ್ಯಕರ್ತರು ಹೊರಟಿದ್ದಾರೆ. ಪೂಜೆ ಮಾಡಲು ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ್ ಗುತ್ತೇದಾರ ರಾಜಕುಮಾರ್ ಪಾಟೀಲ್ ತೆಲ್ಕೂರ ಇತರರನ್ನು ಪೊಲೀಸರು ತಡೆದಿದ್ದಾರೆ.

ಇತ್ತ ಕಡೆ ದರ್ಗಾದೊಳಗೆ ಇವರನ್ನು ಬಿಡುವುದಿಲ್ಲ ಎಂದು ಮುಸ್ಲಿಂ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ. ಎರಡೂ ಕಡೆ ಗುಂಪು ಸೇರಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

Leave A Reply

Your email address will not be published.