ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು ಶವವಾಗಿ ಪತ್ತೆ

Share the Article

ದುಬೈ : ಖ್ಯಾತ ಮಲಯಾಳಿ ಆಲ್ಬಮ್ ನಟಿ ರಿಫಾ ಮೆಹ್ನು (20) ದುಬೈನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ ದುಬೈನ ಜಾಫಾಲಿಯಾದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಸ್ವದೇಶಕ್ಕೆ ತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ

ಕೋಝಿಕ್ಕೋಡ್‌ ಮೂಲದ ರಿಫಾ ಮೆಹನೂ ಪತಿಯೊಂದಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರೀಯರಾಗಿದ್ದರು. ರಿಫಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಸ್ನೇಹಿತರು ತಿಳಿಸಿದ್ದಾರೆ.

ರಿಫಾ ತನ್ನ ಪತಿ ಮೆಹನಾಜ್ ಜೊತೆ ವಾರಗಳ ಹಿಂದೆ ದುಬೈಗೆ ಬಂದಿದ್ದರು. ಸೋಮವಾರ ರಾತ್ರಿಯವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಕಳೆದ ರಾತ್ರಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಹಲವು ವಿಡಿಯೋಗಳು ಈಗ ವೈರಲ್ ಆಗಿದೆ, ಅದರ ಕೆಳಗೆ ಅಭಿಮಾನಿಗಳು ರಿಫಾಳ ಸಾವಿನ ಬಗ್ಗೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ

Leave A Reply