ದ.ಕ.ಹಾಲು ಒಕ್ಕೂಟದಿಂದ ಪ್ರೋತ್ಸಾಹ ಧನ ರೂ.1 ಹೆಚ್ಚಳ
ದ.ಕ.ಹಾಲು ಒಕ್ಕೂಟದಿಂದ ಸದಸ್ಯ ಸಂಘಗಳ ಮೂಲಕ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ರೂ.1.00 ವಿಶೇಷ ಪ್ರೋತ್ಸಾಹಧನ ಹೆಚ್ಚಳ ಮಾಡಿ ದ.ಕ.ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ
ಈ ಕುರಿತು ಹಾಲು ಒಕ್ಕೂಟದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೋನಾ ಹಿನ್ನಲೆಯಲ್ಲಿ ದ.ಕ.ಹಾಲು ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದ ಕಾರಣ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ನೀಡುವ ಹಾಲಿನ ಖರೀದಿ ದರವನ್ನು ಕಡಿಮೆ ಮಾಡಲಾಗಿತ್ತು.
ಪ್ರಸ್ತುತ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರನೆಯಾಗಿರುವ ಹಿನ್ನಲೆಯಲ್ಲಿ ಪ್ರತೀ ಲೀ. ಹಾಲಿಗೆ ರೂ.1.00 ವಿಶೇಷ ಪ್ರೋತ್ಸಾಹಧನ ಹೆಚ್ಚಳ ಮಾಡಿ ದರ ನಿಗದಿಪಡಿಸಿದೆ. ಮಾ.1ರಿಂದ ಎ.30ರವರೆಗೆ ಅನ್ವಯವಾಗುವಂತೆ ಒಕ್ಕೂಟವು ಸದಸ್ಯ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ನೀಡುವ ಪ್ರತೀ ಲೀ. ಹಾಲಿಗೆ ರೂ.೧.೦೦ ರಂತೆ ಹೆಚ್ಚಿಸಿ ಹಾಲು ಉತ್ಪಾದಕರಿಂದ ಖರೀದಿಸುವ ಸರಾಸರಿ ಗುಣಮಟ್ಟದ ಬೆಲೆ(ಶೇ.34ಫ್ಯಾಟ್ ಮತ್ತು ಶೇ.8.5ಎಸ್‌ಎನ್‌ಎಫ್) ರೂ.30 ನಿಗದಿಪಡಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.