ದೇಶದಲ್ಲಿ ಇನ್ನೂ ಮುಗಿದಿಲ್ಲ ಕೊರೊನಾ ಅಬ್ಬರ : ಜೂನ್ ನಲ್ಲಿ ಭಾರತಕ್ಕೆ ಅಪ್ಪಳಿಸಲಿದೆ ನಾಲ್ಕನೇ ಅಲೆ!

Share the Article

ಕೊರೊನಾ ಮೂರನೆ ಅಲೆ ಕಡಿಮೆಯಾಗುತ್ತಿರುವ ಸಮಯದಲ್ಲೇ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಕೊರೊನಾ ನಾಲ್ಕನೇ ಅಲೆ ಜೂನ್ ನಲ್ಲಿ ಬರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಾಲ್ಕನೆಯ ಅಲೆಯಲ್ಲಿ ರೂಪಾಂತರವಾಗುವ ತಳಿಗಳು, ಅವುಗಳ ತೀವ್ರತೆ, ಲಸಿಕೆ ವಿತರಣೆಯ ಸ್ಥಿತಿಗತಿ ಮೊದಲಾದವುಗಳನ್ನು ಆಧರಿಸಿ 4 ನೇ ಅಲೆ ಪರಿಣಾಮ ಉಂಟಾಗಲಿದೆ ಎನ್ನಲಾಗಿದೆ.

ಭಾರತದಲ್ಲಿ ಜೂನ್ ಮಧ್ಯದಿಂದ ಅಂತ್ಯದವರೆಗೆ ನಾಲ್ಕನೇ ಕೋವಿಡ್ ತರಂಗಕ್ಕೆ ಸಾಕ್ಷಿಯಾಗಲಿದೆ. ಹಾಗೂ ಇದು ಸುಮಾರು 4 ತಿಂಗಳವರೆಗೆ ಮುಂದುವರಿಯಲಿದೆ ಎಂದು ಐಐಟಿ ಕಾನ್ಪುರದ ವಿಜ್ಞಾನಿಗಳ ತಂಡವು ಇತ್ತೀಚಿನ ಅಧ್ಯಯನ ತಂಡವು ಹೇಳಿದೆ.

Leave A Reply