ಟಿ.ವಿ.ವಾಲ್ಯೂಮ್ ವಿವಾದ : ಕೋರ್ಟ್ ಮೆಟ್ಟಿಲೇರಿತು
ಟಿವಿ ವ್ಯಾಲ್ಯೂಮ್ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ. ಟಿವಿ ವ್ಯಾಲ್ಯೂಮ್ ಜಾಸ್ತಿ ಇಟ್ಟಿದ್ದ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡಿದ್ದ ಮಹಿಳೆ ಹಾಗೂ ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
ಇನ್ನೂ ಈ ಗಲಾಟೆಯು ಮನೆಯ ಬಳಿ ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರ ಎದುರೇ ಹಲ್ಲೆಗೆ ಯತ್ನ ನಡೆದಿದೆ.
ಕೋಲಾರದ ಪಿಸಿ ಬಡವಾಣೆಯ ರೋಹಿತ್ ಮನೆಯಲ್ಲಿ ಟಿವಿ ವ್ಯಾಲ್ಯುಮ್ ಹೆಚ್ಚಾಗಿದ್ದನ್ನು ಪಕ್ಕದ ಮನೆಯ ಮಂಜುಳಾ ಎಂಬವರು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಗಲಾಟೆ ಮಾಡಿರುವ ರೋಹಿತ್ ಮಂಜುಳಾ ಹಾಗೂ ತಂದೆ ಬಾಬು, ತಾಯಿ ರಾಧಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.