ಪುತ್ತೂರು : ಹಾಸ್ಟೆಲ್‌ನಿಂದ ಕಾಲೇಜಿಗೆಂದು ಹೋದ ವಿದ್ಯಾರ್ಥಿ ನಾಪತ್ತೆ

Share the Article

ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಚಿತ್ರದುರ್ಗದ ಆದಿತ್ಯ ಜೆ(19ವ) ಸಂಸ್ಥೆಯ ವಸತಿ ನಿಲಯದಿಂದ ನಾಪತ್ತೆಯಾದ ವಿದ್ಯಾರ್ಥಿ.

ಫೆ.22ರಂದು ಅವರು ವಸತಿ ನಿಲಯದಿಂದ ಕಾಲೇಜಿಗೆಂದು ಹೋದವರು ಪುನಃ ಹಿಂದಿರುಗಿಲ್ಲ. ಈ ಕುರಿತು ವಿದ್ಯಾಸಂಸ್ಥೆಯಿಂದ ಸಿಸಿ ಕ್ಯಾಮರ ಪರಿಶೀಲಿಸಿದಾಗ ಕಾಲೇಜಿನ ಸಮವಸ್ತ್ರ ಧರಿಸಿ ಹೋಗುತ್ತಿರುವುದು ಕಂಡು ಬಂದಿದ್ದು, ಕೊನೆಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದಲ್ಲಿ ಹುಡುಕಾಟ ನಡೆಸಲಾಗಿತ್ತು.

ಕೊನೆಗೆ ಸಂಸ್ಥೆಯ ವಸತಿ ನಿಲಯದ ಮೇಲ್ವಿಚಾರಕರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply