ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ | ತಾಯಿಯ ಸ್ನೇಹಿತನಿಂದ ನಿರಂತರ ಅತ್ಯಾಚಾರ ,ಇಬ್ಬರಿಗೂ 10 ವರ್ಷ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ
ಹೆತ್ತ ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಕೇರಳದ 50 ವರ್ಷದ ಮಹಿಳೆಯನ್ನು ಅಪರಾಧಿ ಎಂದು ತೀರ್ಪು ನೀಡಿರುವ ನ್ಯಾಯಾಲಯ, ಆಕೆಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಬಾಲಕಿಯ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿರುವುದನ್ನು ದುರ್ಬಳಕೆ ಮಾಡಿಕೊಂಡ ತಾಯಿ,ಆಕೆಯ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿ ಶೋಷಣೆ ಮಾಡಿದ್ದಾಳೆ ಎಂಬುವುದನ್ನು ನ್ಯಾಯಾಲಯ ಗಮನಿಸಿದೆ.
ಕಯನಾಡು ಮೂಲದ ಮೂವಾಟುಪುಝದ ಬಾಲಕಿಯ ತಾಯಿ ಮತ್ತು ಆಕೆಯ ಸ್ನೇಹಿತ ಅರುಣ್ ಕುಮಾರ್ (36) ಪ್ರಕರಣದಲ್ಲಿ ಶಿಕ್ಷೆಗೊಳಗಾದವರು. ಅರುಣ್ ಕುಮಾರ್ ಗೆ 20 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ ರೂ. ವಿಧಿಸಲಾಗಿದೆ. ಮಹಿಳೆ ಯಾವುದೇ ವಿನಾಯತಿಗೆ ಅರ್ಹಳಲ್ಲ ಎಂದು ನ್ಯಾಯಾಲಯ ಹೇಳಿದೆ. ಮಾರ್ಚ್ 2017 ರಿಂದ ಆಗಸ್ಟ್ 2017 ರ ಅವಧಿಯಲ್ಲಿ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಲಾಗಿತ್ತು.
ಅಪರಾಧಿ ಅರುಣ್ ಕುಮಾರ್ ನಿತ್ಯ ಬಾಲಕಿಯನ್ನು ಇಡುಕ್ಕಿಯ ಪಲ್ಲಿವಾಸಲ್‌ಗೆ ಕರೆದೊಯ್ದು, ಅಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ತನಿಖೆ ವೇಳೆ ತಾಯಿಯೇ ಇದಕ್ಕೆ ಕುಮ್ಮಕ್ಕು ನೀಡಿರುವುದು ಪತ್ತೆಯಾಗಿದೆ.” ಒಂದು ಹೆಣ್ಣು ಮಗುವಿನ ತಾಯಿಯಾಗಿ, ಅವಳ ರಕ್ಷಕಳಾಗಬೇಕಿದ್ದ ಮಹಿಳೆ, ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ್ದಾಳೆ ” ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗಳ ವಿರುದ್ಧ ಪೋಕೋ ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಘೋರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ.
ಅಪರಾಧಿಗಳಿಂದ ಸಂಗ್ರಹಿಸುವ ದಂಡದ ಮೊತ್ತವನ್ನು ಸಂತ್ರಸ್ತೆಗೆ ಪಾವತಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.