ಮದರಸಕ್ಕೆ ತೆರಳುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ!! ಒಂದು ತರಗತಿಯಲ್ಲಿ ನಡೆದ ಕೃತ್ಯ ಇನ್ನೊಂದು ತರಗತಿಯಲ್ಲಿ ಬಯಲಾದಾಗ ತುಂಬಿತ್ತು ಎರಡು ತಿಂಗಳು

Share the Article

ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಪ್ರಸ್ತುತ ಕುಮ್ಮನೊಡೆಯ ಪಟ್ಟಿಮಟ್ಟೊಮ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಸವಿದ್ದ ವ್ಯಕ್ತಿಯೋರ್ವ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಘಟನೆಯೊಂದು ನಡೆದಿದೆ.

ಆರೋಪಿಯನ್ನು ಶರಪುದ್ದೀನ್ ಎಂದು ಗುರುತಿಸಲಾಗಿದೆ. ಕೇರಳದ ಥಡಿಯಿಟ್ಟಪರಂಬು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಆರೋಪಿ ಶಾಲೆಗೆ ಬೇಗ ಬರುತ್ತಿದ್ದ ಹುಡುಗಿಯನ್ನು ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಸಂತ್ರಸ್ತೆ, 8 ನೇ ತರಗತಿ ವಿದ್ಯಾರ್ಥಿನಿ. ಇದೀಗ 2 ತಿಂಗಳ ಗರ್ಭಿಣಿ. ಆರೋಪಿ 2021 ರ ನವೆಂಬರ್ ನಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆಯನ್ನು ಮದರಸಾ ತರಗತಿಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಗರ್ಭಿಣಿ ಎಂದು ತಿಳಿದದ್ದು ಹೇಗೆ?

ಮದರಸಾದಲ್ಲಿ ಜೀವಶಾಸ್ತ್ರ ಬೋಧಿಸುವ ಶಿಕ್ಷಕರು, ಹೆಣ್ಣುಮಕ್ಕಳ ನಿಯಮಿತ ಋತುಚಕ್ರದ ಬಗ್ಗೆ ಪಾಠ ಮಾಡುವಾಗ, ಈ ವಿಷಯ ಬೆಳಕಿಗೆ ಬಂದಿದೆ. ಗರ್ಭಿಣಿಯಾದರೆ ಮುಟ್ಟಾಗುವುದಿಲ್ಲ ಎಂದು ಶಿಕ್ಷಕರು ಹೇಳಿದಾಗ, ಸಂತ್ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ತನ್ನ ಸ್ನೇಹಿತೆ ಮುಟ್ಟಾಗಿಲ್ಲ ಎಂದು ಹೇಳಿದ್ದಾಳೆ. ಕೂಡಲೇ ಶಿಕ್ಷಕರು ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿದ್ದಾರೆ. ನಂತರ ಮಕ್ಕಳ‌ ಸಹಾಯವಾಣಿಗೆ ಈ ವಿಷಯ ತಿಳಿಸಲಾಗಿದೆ.

Leave A Reply