ಬೆಳ್ತಂಗಡಿ:ಕಾಲೇಜಿಗೆಂದು ತೆರಳಿ ನಾಪತ್ತೆಯಾಗಿದ್ದ ಬೆಳಾಲಿನ ಬಾಲಕ ಪತ್ತೆ

ಬೆಳ್ತಂಗಡಿ:ಕಾಲೇಜಿಗೆಂದು ತೆರಳಿ ನಾಪತ್ತೆಯಾಗಿದ್ದ ಬೆಳಾಲಿನ ಬಾಲಕ ಉಡುಪಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

 

ಬೆಳಾಲು ಜೇರಿ ಡಿಸೋಜಾ ಇವರ ಮಗ ಪ್ರಥಮ್ ಡಿಸೋಜಾ ನಾಪತ್ತೆ ಆದ ಘಟನೆ ಫೆ.21 ರಂದು ನಡೆದಿದ್ದು,ಮಡಂತ್ಯಾರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ್ ಕಾಲೇಜಿಗೂ ಹೋಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದ. ಇಂದು ಬೆಳಗ್ಗೆ ಉಡುಪಿ ಜಿಲ್ಲೆಯಲ್ಲಿ ಕಾರಿನ ಪಕ್ಕ ಕುಳಿತು ಅಳುತಿದ್ದು,ಸಾರ್ವಜನಿಕರು ವಿಚಾರಿಸಿದಾಗ ಮನೆ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದು,ಅದರಂತೆ ಮನೆಯವರಿಗೆ ಮಾಹಿತಿ ಕೊಟ್ಟಿದ್ದಾರೆ.

ಸಂಬಂಧಿಕರೊಬ್ಬರು ಬಾಲಕನನ್ನು ಕರೆತರುತ್ತಿದ್ದು ಇಲ್ಲಿಂದ ಮನೆಯವರು ಕೂಡ ಉಡುಪಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.ತಮ್ಮ ಮಗನನ್ನು ಪತ್ತೆ ಮಾಡಿಕೊಡುವಂತೆ
ವಿದ್ಯಾರ್ಥಿಯ ಹೆತ್ತವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಇದೀಗ ಧರ್ಮಸ್ಥಳ ಠಾಣೆಗೆ
ಬಾಲಕನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದ ಮೇಲೆ ನಾಪತ್ತೆಗೆ ಕಾರಣ ತಿಳಿದುಬರಬೇಕಿದೆ.

Leave A Reply

Your email address will not be published.