‘ ಆಟೋ ರಿಕ್ಷಾ ಮಾಲೀಕ’ ರಿಗೆ ಬಿಗ್ ಶಾಕ್| ಮಾ. 31 ರಿಂದ ‘ ಟು- ಸ್ಟ್ರೋಕ್ ಆಟೋ’ ನಿಷೇಧ | ರಾಜ್ಯ ಸರಕಾರ ಆದೇಶ

ಬೆಂಗಳೂರು : ಮಾರ್ಚ್ 1 ರಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂದು ರಾಜ್ಯ ಸರಕಾರ ಹೇಳಿಕೆಯೊಂದನ್ನು ನೀಡಿದೆ. ಇದು ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ನೀಡಿದಂತಾಗಿದೆ.

ರಾಜ್ಯ ಸರಕಾರದಿಂದ ಟು-ಸ್ಟ್ರೋಕ್ ಆಟೋ ರಿಕ್ಷಾಗಳನ್ನು ಸ್ಕ್ರ್ಯಾಪ್ ಮಾಡಿ‌ 4 ಸ್ಟ್ರೋಕ್ ಆಟೋಗಳನ್ನು ಖರೀದಿಸುವಂತೆ ಈ ಹಿಂದೆ ಆದೇಶ ನೀಡಿತ್ತು. ಆದರೆ ಕೋವಿಡ್ ಬಂದ ನಂತರ ಆರ್ಥಿಕ ಸಂಕಷ್ಟದಿಂದಾಗಿ ಇದು ಅನೇಕ ಆಟೋ ಮಾಲೀಕರಿಗೆ ಸಾಧ್ಯವಾಗಿರಲಿಲ್ಲ.

ಎಪ್ರಿಲ್ 1 ರಿಂದ ಟು- ಸ್ಟ್ರೋಕ್ ಆಟೋಗಳ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣವನ್ನು ನಿಷೇಧಿಸಲಾಗುತ್ತಿದೆ. ಹೀಗಾಗಿ ಮಾರ್ಚ್ 31 ರಿಂದ ಟು ಸ್ಟ್ರೋಕ್ ಟು ಸ್ಟ್ರೋಕ್ ಆಟೋಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಇದರಿಂದಾಗಿ ಸಾವಿರಾರು ಟು- ಸ್ಟ್ರೋಕ್ ಆಟೋ ಮಾಲಿಕರಿಗೆ ಬಿಗ್ ಶಾಕ್ ನೀಡಿದಂತೆ ಆಗಿದೆ.

Leave A Reply

Your email address will not be published.