ಜಪ್ತಿ ಮಾಡಿದ ವಾಹನದ ತೆರಿಗೆಯನ್ನು ಜಪ್ತಿ ಮಾಡಿದ ಸಂಸ್ಥೆಯೇ ಕಟ್ಟಬೇಕು : ಸುಪ್ರೀಂ ಕೋರ್ಟ್ ಆದೇಶ

ವಾಹನ ಸಾಲದ ಅಡಿ ಖರೀದಿಸಲಾದ ಅಥವಾ ಬಾಡಿಗೆ ಯಾ ಭೋಗ್ಯಕ್ಕೆ ಪಡೆಯಲಾಗಿರುವ ಅಥವಾ ಮತ್ಯಾವುದೇ ರೀತಿಯ ಕಾನೂನಾತ್ಮಕ ಒಪ್ಪಂದದ ಮೇರೆಗೆ ಪಡೆಯಲಾಗಿರುವ ವಾಹನದ ಸಾಲದ ಕಂತು ಕಟ್ಟದ ಕಾರಣ ಬ್ಯಾಂಕ್ ಅಥವಾ ಯಾವುದಾದರೂ ಹಣಕಾಸು ಸಂಸ್ಥೆ ಆ ವಾಹನವನ್ನು ಜಪ್ತಿ ಮಾಡಿದ್ದರೆ, ಜಪ್ತಿ ಮಾಡಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಆ ವಾಹನಕ್ಕೆ ಸಂಬಂಧಪಟ್ಟ ಎಲ್ಲ ತೆರಿಗೆಗಳನ್ನು ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಹೇಂದ್ರ ಆಂಡ್ ಮಹೇಂದ್ರ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆ ತಮ್ಮ ಗ್ರಾಹಕರೊಬ್ಬರಿಗೆ ವಾಹನ‌ ಖರೀದಿಸಲು ಸಾಲ‌ ನೀಡಿತ್ತು. ಕಂತನ್ನು ಪಾವತಿಸದೇ ಇದ್ದುದ್ದರಿಂದ ಕಂಪನಿಯು ವಾಹನವನ್ನು ಜಪ್ತಿ ಮಾಡಿತು.

ನಂತರ ಜಪ್ತಿ ಮಾಡಿದ ವಾಹನದ ತೆರಿಗೆಯನ್ನು ಯಾರು ಕಟ್ಟಬೇಕು? ವಾಹನ ಖರೀದಿಸಿದ ವ್ಯಕ್ತಿಯೇ ಅಥವಾ ಜಪ್ತಿ ಮಾಡಿದ ಸಂಸ್ಥೆಯೇ ? ಎಂಬ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ವಾಹನದ ತೆರಿಗೆಯನ್ನು ಮಹೇಂದ್ರ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆ ಕಟ್ಟಬೇಕು ಎಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

Leave A Reply

Your email address will not be published.