ಎರಡು ವರ್ಷದಲ್ಲಿ ಬರೋಬ್ಬರಿ ಮೂರು ಕೋಟಿ ಪೇಪರ್ ಉಳಿಸಿದ ಸುಪ್ರೀಂಕೋರ್ಟ್ !!
ಪರಿಸರ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ತೆಗೆದುಕೊಂಡಿದ್ದ ನಿರ್ಧಾರವೊಂದು ಯಶಸ್ವಿ ಫಲ ನೀಡಿದ್ದು, A4 ಸೈಜ್ ಪುಟಗಳಲ್ಲಿ ಡಬಲ್ ಸೈಡ್ ಪ್ರಿಂಟಿಂಗ್‌ನಿಂದಾಗಿ ಎರಡು ವರ್ಷದಲ್ಲಿ ಬರೋಬ್ಬರಿ ಮೂರು ಕೋಟಿ ಪೇಪರ್‌ಗಳನ್ನು ಸುಪ್ರೀಂ ಕೋರ್ಟ್ ಉಳಿಸಿದೆ.
2020ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಹೇಮಂತ್ ಗುಪ್ತಾ ಅವರ ಸಮಿತಿಯು ಪೇಪರ್‌ನಲ್ಲಿ ಸಿಂಗಲ್ ಸೈಡ್ ಪ್ರಿಂಟಿಂಗ್ ಬದಲು A4 ಶೀಟ್‌ನಲ್ಲಿ ಡಬಲ್ ಸೈಡ್ ಪ್ರಿಂಟಿಂಗ್ ಮಾಡಲು ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಪೇಪರ್ ಉಳಿಸುವುದು ಆ ಮೂಲಕ ಮರಗಳ ಸಂರಕ್ಷಣೆಗೆ ಈ ಶಿಫಾರಸ್ಸು ಮಾಡಲಾಗಿತ್ತು.
ಪರಿಸರದಲ್ಲಿ ಮರಗಳು ಉಳಿಯಬೇಕು ಮತ್ತು ಆಮ್ಲಜನಕದ ಪ್ರಮಾಣದ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಾದರಿಯಾಗಬೇಕು ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಸಮಿತಿ ನೀಡಿದ್ದ ಶಿಫಾರಸು ಅಂಗೀಕರಿಸಿ ಜಾರಿಗೆ ತಂದಿದ್ದರು.
ನ್ಯಾ. ಭಟ್ ಮತ್ತು ಗುಪ್ತಾ ಸಮಿತಿ ವರದಿಗೆ ಆರಂಭದಲ್ಲಿ ವಿರೋಧ ಕೇಳಿ ಬಂದಿತ್ತು. ಆದರೆ ಏಪ್ರಿಲ್ 1, 2020ರಲ್ಲಿ, ನ್ಯಾಯಾಲಯವು ಫೈಲಿಂಗ್ ಅನ್ನು A4 ಗಾತ್ರದ ಪೇಪರ್‌ಗಳಲ್ಲಿ ಮಾಡಬೇಕೆಂದು ಆದೇಶಿಸಿತು. ಈ ಹಿಂದೆ ಕಾನೂನು ಗಾತ್ರದ ಕಾಗದವು 35.56 cm x 21.59 cm ಅನ್ನು ಹೊಂದಿತ್ತು. ಇದು A4 ಶೀಟ್ ಕಾಗದಕ್ಕಿಂತ ಸರಿಸುಮಾರು 23 ರಷ್ಟು ದೊಡ್ಡದಾಗಿತ್ತು.
ಕೊಲ್ಕತ್ತಾ, ತ್ರಿಪುರಾ, ಕೇರಳ, ದೆಹಲಿ, ಅಲಹಾಬಾದ್ ಮತ್ತು ಮುಂಬೈ ಹೈಕೋರ್ಟ್‌ಗಳು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ A4 ಸೈಜ್ ಪೇಪರ್ ಅನ್ನು ಬಳಕೆ ಮಾಡುತ್ತಿವೆ. ವಿಸ್ಲ್ ಫಾರ್ ಪಬ್ಲಿಕ್ ಇಂಟರೆಸ್ಟ್ ಎಂಬ ಸಂಘಟನೆಯ ಮೂವರು ಕಾನೂನು ವಿದ್ಯಾರ್ಥಿಗಳು 2019ರ ಅಕ್ಟೋಬರ್‌ನಲ್ಲಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪತ್ರದ ಮೂಲಕ A4 ಸೈಜ್ ಪೇಪರ್ ಅನ್ನು ಎಲ್ಲಾ ನ್ಯಾಯಾಲಯಗಳಲ್ಲಿ ಬಳಸುವಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.