ಸಹಾಯಕ್ಕೆ ಎಂದೂ ಸೈ ನಮ್ಮ ಹೆಮ್ಮೆಯ ‘ಭಾರತ’|ಪಾಕಿಸ್ತಾನ ಮಾರ್ಗವಾಗಿ ಅಫ್ಘಾನಿಸ್ತಾನ್ ಗೆ 2,500 ಟನ್ ಗೋಧಿ ರವಾನಿಸಿದ ಭಾರತ !! | ಭಾರತ ಸರ್ಕಾರದ ಸಹಾಯ ಹಸ್ತಕ್ಕೆ ಅಫ್ಘನ್ ಪ್ರಜೆಗಳಿಂದ ಹೃದಯಪೂರ್ವಕ ಧನ್ಯವಾದ

ಅಮೃತಸರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಜನರು ಕಂಗೆಟ್ಟಿದ್ದಾರೆ. ಸ್ವತಂತ್ರವಾಗಿ ಬದುಕಲು ಹಕ್ಕಿಲ್ಲದೇ, ತಿನ್ನಲು ಆಹಾರವೂ ಇಲ್ಲದೆ ಬಳಲುತ್ತಿದ್ದು, ರಕ್ಕಸರ ಹಾಗೆ ಅವರ ಆಡಳಿತ ಪ್ರತಿಯೊಂದಕ್ಕೂ ಕಠಿಣ ನಿಯಮವನ್ನೇ ಘೋಷಿಸುತ್ತಿದೆ.ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು ನೀಡುವ ಸಲುವಾಗಿ ಭಾರತವು ನಿನ್ನೆ 50,000 ಮೆಟ್ರಿಕ್ ಟನ್ ಗೋಧಿ ತುಂಬಿದ 50 ಟ್ರಕ್‌ಗಳನ್ನು ಕಳುಹಿಸಿದೆ.

ಗೋಧಿ ತುಂಬಿದ ಈ ಟ್ರಕ್‌ಗಳು ಪಾಕಿಸ್ತಾನದ ಕಾರವಾನ್ ಅಟ್ಟಾರಿ ವಾಘಾ ಗಡಿಯ ಮೂಲಕ ಅಫ್ಘಾನಿಸ್ತಾನವನ್ನು ಪ್ರವೇಶಿಸಲಿದೆ.ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶೃಂಗ್ಲಾ ಮತ್ತು ಭಾರತದಲ್ಲಿ ಅಫ್ಘಾನಿ ಸ್ಥಾನದ ರಾಯ ಭಾರಿ ಫ‌ರೀದ್‌ ಮಮಾಜೆ ಅವರು ಅಟ್ಟಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಟ್ರಕ್‌ಗಳ ಮೂಲಕ 2,500 ಟನ್‌ ಗೋಧಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಗೋಧಿ ಸಂಗ್ರಹಿಸಲು ಅಲ್ಲಿಂದ ಟ್ರಕ್‌ಗಳನ್ನು ತಂದ ಅಫ್ಘಾನಿಸ್ತಾನದ ಜನರು ಅಫ್ಘಾನಿಸ್ತಾನದ ಸಾರ್ವಜನಿಕರ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಗೋಧಿಯ ಅಗತ್ಯ ಬಹಳ ಇದ್ದು,ಅಲ್ಲಿ ಜನರ ಬಳಿ ಹಣವಿಲ್ಲ ಮತ್ತು ಅವರು ತುಂಬಾ ಬಡವರು.ಭಾರತದ ಸಹಾಯಕ್ಕೆ ಧನ್ಯವಾದ ಕೂಡ ಅವರು ಈ ವೇಳೆ ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ಆರಂಭದಲ್ಲಿ ಮಾನವೀಯ ನೆಲೆಯಲ್ಲಿ ಆಫ್ಘನ್ನರಿಗೆ ಸಹಾಯ ಮಾಡಲು ಭಾರತ ನಿರ್ಧರಿಸಿತ್ತು. ಆದರೆ ಟ್ರಕ್‌ಗಳು ಕಾರವಾನ್ ಪಾಕಿಸ್ತಾನದ ಮೂಲಕ ಹಾದುಹೋಗಬೇಕಾಗಿರುವುದರಿಂದ ಅದರ ಒಪ್ಪಿಗೆ ಪಡೆಯಲು ಬಹಳ ಸಮಯ ತೆಗೆದುಕೊಂಡಿತು. ಒಪ್ಪಿಗೆ ಸಿಕ್ಕ ಬಳಿಕ ಇಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ವಿಶ್ವ ಆಹಾರ ಕಾರ್ಯಕ್ರಮ ಮತ್ತು ಇತರರ ಸಮ್ಮುಖದಲ್ಲಿ ಟ್ರಕ್‌ಗಳು ಅಫ್ಘಾನಿಸ್ತಾನಕ್ಕೆ ತೆರಳಿದವು.

‘ಮಾನವೀಯ ನೆರವಿಗಾಗಿ ನಾವು ಅಫ್ಘಾನಿಸ್ತಾನಕ್ಕೆ 50,000 ಟನ್ ಗೋಧಿಯನ್ನು ನೀಡುತ್ತಿದ್ದೇವೆ’ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಗೋಧಿ ತುಂಬಿದ 50 ಟ್ರಕ್‌ಗಳ ಮೊದಲ ರವಾನೆಯನ್ನು ಅಫ್ಘಾನಿಸ್ತಾನಕ್ಕೆ ರವಾನಿಸಿದರು. ಇಂದು ನಾವು 50 ಅಫ್ಘಾನಿ ಟ್ರಕ್‌ಗಳಲ್ಲಿ 2,500 ಟನ್‌ಗಳ ನಮ್ಮ ಮೊದಲ ರವಾನೆಯನ್ನು ಕಳುಹಿಸಿದ್ದೇವೆ. ಇದನ್ನು ವಿತರಿಸಲು ವಿಶ್ವ ಆಹಾರ ಕಾರ್ಯಕ್ರಮಕ್ಕೆ ಹಸ್ತಾಂತರಿಸಲಾಗುವುದು ಎಂದರು.

ಭಾರತದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಕಂಟ್ರಿ ಡೈರೆಕ್ಟರ್ ಬಿಶಾ ಪರಾಜುಲಿ ಪ್ರಕಾರ, ಈ ಸಂಸ್ಥೆಯು ಈಗಾಗಲೇ ಸುಮಾರು 7 ಮಿಲಿಯನ್ ಆಫ್ಘನ್‌ಗಳಿಗೆ ಸಹಾಯ ಮಾಡಿದೆ. ಅಫ್ಘಾನಿಸ್ತಾನದಲ್ಲಿ, ಸುಮಾರು 22 ಮಿಲಿಯನ್ ಜನರು ಧಾನ್ಯಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಜನಸಂಖ್ಯೆಯು ಅಫ್ಘಾನಿಸ್ತಾನದ ಜನಸಂಖ್ಯೆಯ ಅರ್ಧದಷ್ಟು ಇದೆ ಎಂದಿದ್ದಾರೆ.

Leave A Reply

Your email address will not be published.