ಬೆಳ್ತಂಗಡಿ:ಪ್ರೀತಿಯ ವಿಚಾರವಾಗಿ ಮನನೊಂದು ನೆರಿಯದ ಯುವಕ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣು|ಚಿಕಿತ್ಸೆ ಫಲಕಾರಿಯಾಗದೆ ಸಾವು

Share the Article

ಬೆಳ್ತಂಗಡಿ: ನೆರಿಯದ ಯುವಕ ಪ್ರೀತಿ ವಿಚಾರದಲ್ಲಿ ಮನನೊಂದು,ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.

ಮೃತ ಯುವಕ ನೆರಿಯ ಗ್ರಾಮದ ದೇವಗಿರಿ ನಿವಾಸಿ
ಜೋಬಿಷ್ ಕಡುವಪ್ಪಾರ(26).

ಆರು ವರ್ಷಗಳಿಂದ ಮಂಗಳೂರಿನಲ್ಲಿ ಆಟೋವನ್ನು ಖರೀದಿಸಿ ಕಂಕನಾಡಿ ವ್ಯಾಪ್ತಿಯಲ್ಲಿ ಬಾಡಿಗೆ ಮಾಡುತ್ತಿದ್ದ ಯುವಕ ಪ್ರೀತಿಯ ಬಲೆಗೆ ಬಿದ್ದು ಯುವತಿಯ ವಿಚಾರದಲ್ಲಿ ಮನನೊಂದಿದ್ದ.ಫೆ.12 ರಂದು ತನ್ನ ಆಟೋದಲ್ಲಿ ವಿಷ ಆಹಾರ ಸೇವಿಸಿದ್ದ ಎನ್ನಲಾಗಿದೆ.

ತಕ್ಷಣ ಆತನ ಗೆಳೆಯರು ವೆಬ್ಲಾಕ್ ಆಸ್ಪತ್ರೆಗೆ
ದಾಖಲಿಸಿದ್ದರು ಆದರೆ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ. ನಂತರ ಆರೋಗ್ಯ ಹದಗೆಟ್ಟ ಹಿನ್ನೆಲೆ ಪುನಃ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave A Reply