ಹಸಿಬಿಸಿ ದೃಶ್ಯಗಳಿಂದಲೇ ಕೂಡಿದ ‘ಗೆಹರಾಯಿಯಾ’ ಸಿನಿಮಾದ ಬಗ್ಗೆ ಮಾಜಿ ಪೊಲೀಸ್ ಕಮೀಷನರ್ ಟ್ವೀಟ್| ಸಿನಿಮಾವನ್ನು ಕೇವಲ 20 ನಿಮಿಷ ಮಾತ್ರ ನೋಡಿ ಎದ್ದು ಬಂದ ಅಧಿಕಾರಿ|
ಇತ್ತೀಚೆಗಷ್ಟೇ ಬಿಡುಗಡೆಯಾ ಸಿನಿಮಾ ‘ ಗೆಹರಾಯಿಯಾ’ ಬಗ್ಗೆ ಹಲವು ಚರ್ಚೆಗಳು ಹುಟ್ಟಿದೆ. ತುಂಡುಡುಗೆ, ಪದೇ ಪದೇ ಕಿಸ್ಸಿಂಗ್ ಸೀನ್ ಜೊತೆಗೆ ಗೊಂದಲಮಯವಾದ ಸಂಬಂಧಗಳು ಇವೆಲ್ಲವೂ ಈ ಸಿನಿಮಾದಲ್ಲಿ ಭರಪೂರವಾಗಿದೆ. ಒಟ್ಟಾರೆ ಹಸಿಬಿಸಿ ದೃಶ್ಯಗಳು ಈ ಸಿನಿಮಾದಲ್ಲಿ ನೋಡಬಹುದು. ಹಾಗಾಗಿಯೇನೋ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆ ನೋಡೋಕೆ ಹೋದರೆ ಈ ಸಿನಿಮಾಗೆ ಎಲ್ಲಾ ಕಡೆಯಿಂದ ನೆಗೆಟಿವ್ ವಿಮರ್ಶೆಗಳು ಲಭ್ಯವಾಗಿದೆ. ಈ ಸಿನಿಮಾ ನೋಡಿದ ಕಂಗನಾ ಇತ್ತೀಚೆಗಷ್ಟೇ ಇದೊಂದು ಕೆಟ್ಟ ಸಿನಿಮಾ, ಅಶ್ಲೀಲ ಸಿನಿಮಾ, ಸ್ಕಿನ್ ಶೋ ಮಾಡಿದರೆ ಸಿನಿಮಾ ಗೆಲ್ಲಿಸಲು ಸಾಧ್ಯವಿಲ್ಲ. ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾನೇ ಎಂದು ಹೇಳಿಕೊಂಡಿದ್ದಳು.
ಶಕುನ್ ಬಾತ್ರಾ ನಿರ್ದೇಶನ ‘ ಗೆಹರಾಯಿಯಾ’ ಸಿನಿಮಾ ಆಧುನಿಕ ಕಾಲಘಟ್ಟದ ಸಂಬಂಧಗಳು ಎಷ್ಟು ಗೊಂದಲಗಳಿಂದ ಕೂಡಿರುತ್ತದೆ ಎನ್ನುವುದನ್ನು ತೋರಿಸಿದೆ.
ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಯಂತೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದು ನೋಡಿದರೆ, ಈಗಿನ ನವನಟಿಯರು ಕೂಡಾ ನಾಚಬಹುದು ಅಷ್ಟೊಂದು ಬೋಲ್ಡಾಗಿ ನಟಿಸಿದ್ದಾರೆ ದೀಪಿಕಾ ಪಡುಕೋಣೆ.
ಇತ್ತೀಚೆಗಷ್ಟೇ ಈ ಸಿನಿಮಾವನ್ನು ನೋಡಿದ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಈ ಸಿನಿಮಾ ಬಗ್ಗೆ ತಮ್ಮಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ” ನಾವು ಗೆಹರಾಯಿಯಾ ಚಿತ್ರವನ್ನು ವೀಕ್ಷಿಸಲು ಪ್ರಾರಂಭಿಸಿ 20 ನಿಮಿಷಗಳ ನಂತರ ಈ ಚಿತ್ರ ವೀಕ್ಷಿಸಲು ನಿಲ್ಕಿಸಿದೆ. ಜೀವನದ ಮೌಲ್ಯಗಳಿಗೆ ಚಿತ್ರ ಅವಮಾನಿಸಿದೆ ಎಂದು ನನಗನಿಸುತ್ತದೆ. ನಾನು ದೀಪಿಕಾ ಅವರ ಅಭಿಮಾನಿ. ನಮ್ಮ ಬೆಂಗಳೂರಿನ ಹುಡುಗಿ, ಸಾಧಕಿ, ಧೈರ್ಯಶಾಲಿ ಹೆಣ್ಣುಮಗಳು. ಹೆಣ್ಣುಮಕ್ಕಳು ಅದರಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ದೀಪಿಕಾಳನ್ನು ಆರಾಧಿಸುತ್ತಾರೆ, ಅನುಸರಿಸುತ್ತಾರೆ. ಆದರೆ ಈ ಸಿನಿಮಾದಲ್ಲಿ ವಿವಾಹೇತರ ಸಂಬಂಧ ಇದೆ. ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ನಾನು ಹಳೆಯ ಕಾಲದವನಾ ? ” ಎಂದು ಟ್ವೀಟ್ ಮಾಡಿದ್ದಾರೆ.